ದುಬೈ.ಆ,16: ಅಜ್ಮಾನ್‌ನಿಂದ ಶಾರ್ಜಾ ಮಾರ್ಗವಾಗಿ ದುಬೈಗಿರುವ ಸರ್ವೀಸ್ ರಸ್ತೆಯನ್ನು ಮತ್ತೆ ಎರಡು ವಾರಗಳ ವರೆಗೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯ ಅಲ್ ತಿಖ ಕ್ಲಬ್ ಫಾರ್ ಹ್ಯಾಂಡಿ ಕ್ಯಾಪೆಡ್ ಬೃಡ್ಜ್‌ನ ಕೆಲಗಡೆ ಇರುವ ಸರ್ವೀಸ್ ರಸ್ತೆಯನ್ನು ಮುಚ್ಚಲಾಗುವುದು ಎಂದು ಯುಎಇ ಇನ್ಫ್ರಾಟ್ರಕ್ಚರ್ ಡೆವಲಪ್ಮೆಂಟ್ ಸಚಿವಾಲಯ ತಿಳಿಸಿದೆ. ಆಗಸ್ಟ್ 16ರ ಬಳಿಕ ವೃತ್ತಿ ದಿನಗಳಲ್ಲಿ ಬೆಳಗ್ಗೆ 1ರಿಂದ 5:30ವರೆಗೆ ಮತ್ತು ಶುಕ್ರವಾರ ಬೆಳಗ್ಗೆ 2ರಿಂದ 10ರ ವರೆಗೆ ಈ ಮಾರ್ಗದಲ್ಲಿನ ಸೇವೆಯನ್ನು ಮೊಟಕುಗೊಳಿಸಲಾಗುತ್ತಿದ್ದು, ಅನ್ಯ ಮಾರ್ಗವನ್ನು ಅವಲಂಬಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.