ಹೊಸನಗರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ , 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ , ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ತಹಸಿಲ್ದಾರ್ ಶ್ರೀಧರಮೂರ್ತಿ ನೆರವೇರಿಸಿದರು, ಸ್ವಾತಂತ್ರೋತ್ಸವದ ಕುರಿತು ದೇಶಪ್ರೇಮವು ಈಮಾನಿನ ಒಂದು ಭಾಗವಾಗಿದೆ ಮೌಲಾನಾ ಮೊಹಮ್ಮದ್ ಅಲಿ ಮದನಿ ಮಾತನಾಡಿದರು.
ಈ ಸಂದರ್ಭದಲ್ಲಿ ಗುರಣ್ಣ ಎಸ್ ಹೆಬ್ಬಾಳ್ ಸರ್ಕಲ್ ಇನ್ಸ್ಪೆಕ್ಟರ್, ಲಿಂಗರಾಜ್ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆ, ಅಶ್ವಿನಿ ಕುಮಾರ್ ಸದಸ್ಯರು ಪಟ್ಟಣ ಪಂಚಾಯಿತಿ, ಶ್ರೀಧರ್ ಉಡುಪ ಎನ್, ಎನ್ ಆರ್ ದೇವಾನಂದ್, ಎಂ ವಿ ಜಯರಾಮ್, ಶ್ರೀಪತಿ ರಾವ್, ಗಜಾನನ ನಿರೇರಿ ಶಿಕ್ಷಕರು ,ನಾಸಿರ್ ಮುಸ್ಲಿಯಾರ್, ಹಿರಿಯರಾದ ಕಾಸಿಮ್ ಸಾಹೇಬ್, ಮಸೀದಿಯ ಕಮಿಟಿಯ ಅಧ್ಯಕ್ಷರಾದ ಅಮಾನುಲ್ಲಾ ರವರು ಮದ್ರಸದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಎ ಯಾಸೀರ್ ಸ್ವಾಗತಿಸಿ ಕೊನೆಯಲ್ಲಿ ಫಲತಾಂಬೂಲ ನೀಡುವುದರ ಮೂಲಕ ವಂದಿಸಿದರು.