✍ಇಸ್ಹಾಕ್ ಸಿ.ಐ.ಫಜೀರ್
ಜಾತಿ,ಮತ,ಪಂಥ,ಸಿರಿತನ,ಬಡತನಗಳ ಭೇದವಿಲ್ಲದೆ ಉತ್ಸಾಹ,ಸಂಭ್ರಮದಿಂದ ಆಚರಿಸುವ ಭಾರತೀಯ ರಾಷ್ಟ್ರೀಯ ಹಬ್ಬಕ್ಕೆ 72 ರ ಸಂಭ್ರಮ.
ಪ್ರತಿಯೊಬ್ಬ ಭಾರತೀಯನು ಎದೆಯುಬ್ಬಿಸಿ,ಎದೆ ತಟ್ಟಿ ಅಭಿಮಾನ ಪಡಬೇಕಾದ ಕ್ಷಣ.ಭಾರತೀಯರ ಏಕ ಬಾತೃತ್ವದ ದೀಘಕಾಲದ ಹೋರಾಟದ ಪರಿಣಾಮ ಬ್ರಿಟೀಷ್ ವೈಸ್ರಾಯ್ ಯೂನಿಯನ್ ಜಾಕ್ ಬ್ರಿಟೀಷ್ ಧ್ವಜವನ್ನು ಕೆಳಗಿಳಿಸಿ ಇನ್ನು ನಮಗೆ ಈ ನೆಲದಲ್ಲಿ ಉಳಿಗಾಲವಿಲ್ಲವೆಂದು ತೀರ್ಮಾನಿಸಿ ಭಾರತ ಬಿಟ್ಟು ತೊಳಗಬೇಕಾಯಿತು.
ಅದರಂತೆ 1947 ಅಗಸ್ಟ್14 ರ ಮಧ್ಯರಾತ್ರಿ ಈ ದೇಶವು ಸ್ವಾತಂತ್ರವಾಯಿತು.ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕೆಂಪುಕೋಟೆಯಲ್ಲಿ
ದ್ವಜಾರೋಹಣ ಗೈಯುವುದರ ಮೂಲಕ ಭಾರತಕ್ಕೆ ಹೊಸ ಇತಿಹಾಸ ರೂಪಿಸಿದರು.ಭಾರತವು ಸ್ವತಂತ್ರ ದೇಶವಾಗಿ ಹೊರಹೊಮ್ಮಿತು.
ದೇಶ ಸ್ವತಂತ್ರಗೊಂಡು ಮುಕ್ಕಾಲು ಶತಮಾನ ಕಳೆಯಿತು.ಆದರೆ ಸ್ವತಂತ್ರ ಹೋರಾಟದ ರೂವಾರಿ ಮಹಾತ್ಮ ಗಾಂಧಿ ಕಂಡ ಕನಸುಗಳು ಮಾತ್ರ ನನಸಾಗದೆ ಉಳಿದಿವೆ.ಕೋಮುವಾದಿಗಳ ಭಯೋತ್ಪಾದಕರ ಅಟ್ಟಹಾಸ ಭಾರತದಲ್ಲಿ ಮುಗಿಲು ಮುಟ್ಟಿವೆ. ಅಮಾಯಕರ ರಕ್ತ ತೋಡಿನಂತೆ ಹರಿಯುತ್ತಿದ್ದರೆ ಕೋಮುವಾದಿಗಳ ಕರಾಳ ಕೈಗೆ ಸಿಲುಕಿ ನಲುಗಿ ಸಾವನ್ನಪಿದ ಬಡಪಾಯಿಗಳ ನಿಷ್ಚಲ ದೇಹ ಶಿಖರದೆತ್ತರ ತಲುಪಿದೆ.
ಅತ್ಯಾಚಾರ ಎಂಬ ಅನಾಗರಿಕ ಕೃತ್ಯ ಹೆಗ್ಗಿಲ್ಲದೆ ನಡೆಯುತ್ತಿದೆ. ಸ್ವತಂತ್ರ ಭಾರತದಲ್ಲಿ ಅತಂತ್ರ ಸ್ಥಿತಿಯನ್ನು ಭಾರತೀಯರು ಎದುರಿಸುತ್ತಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು.
ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೆ ಅದು ಅಂಬಾನಿ, ಅದಾನಿ ಉದ್ಯಮಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ಮತ್ತು 2006ರ ಮಾಲೇಂಗಾವ್ ಸ್ಫೋಟ,2007ರ ಮೇ ತಿಂಗಳಿನಲ್ಲಿ ನಡೆದ ಹೈದ್ರಾಬಾದಿನ ಮಸೀದಿ ಸ್ಫೋಟ, 2007ರ
ಅಕ್ಟೋಬರ್ನಲ್ಲಿ ನಡೆದ ಅಜ್ಮೀರ್ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಸ್ಪೋಟ ಸೇರಿದಂತೆ ಭಯೋತ್ಪಾದನಾ ಕೃತ್ಯಗಳಲ್ಲಿ ಬಂಧಿತರಾಗಿ ಬಿಡುಗಡೆಗೊಂಡ ಸಂಘಪರಿವಾರದ ಭಯೋತ್ಪಾದಕ ಆರೋಪಿಗಳಿಗೆ ಮತ್ತು ಕೋಮುವಾದಿಗಳಿಗೆ,ಅತ್ಯಾಚಾರಿಗಳಿಗೆ ಮಾತ್ರ ಎಂದರೂ ತಪ್ಪಾಗಲಾರದು.
ಪ್ರಸ್ತುತ ಸನ್ನಿವೇಶದಲ್ಲಿ ಮಾನವೀಯತೆ ಮರೀಚಿಕೆಯಾಗಿದೆ, ಜಾತಿ ಧರ್ಮಗಳ ನಡುವಿನ ಬಾಂಧವ್ಯದ ಸೇತುವೆ ಬಿರುಕು ಬಿಟ್ಟಿವೆ.ಕಿರಾತಕರಿಗೆ ಇಲ್ಲಿ ಕೊಲೆ, ದೌರ್ಜನ್ಯ, ಹಿಂಸೆ, ಅತ್ಯಾಚಾರ ಮದ್ಯಸಾರ, ಆಕ್ರಮಣ ಮತ್ತು ಅನೀತಿಗಳು ನಿತ್ಯದ ಕಸಬಾಗಿವೆ.
ಜಾತಿ ಧರ್ಮಗಳ ನಡುವಿನ ವೈಷಮ್ಯ ಉಲ್ಬಣಗೊಳ್ಳುತ್ತಿವೆ, ಅಮಾಯಕರ ಸಾವು, ನೋವುಗಳು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ದೇಶದ ಪ್ರಥಮ ಕಾಂಗ್ರೆಸ್ ಆಡಳಿತ
ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ನಿಂದ ಹಿಡಿದು ಪ್ರಸ್ತುತ ಬಿಜೆಪಿ ಆಡಳಿತ
ಪ್ರಧಾನಿ ನರೇಂದ್ರ ಮೋದಿಜೀ ಯವರೆಗೆ ಈ ದೇಶ ಅದಷ್ಟೋ ಪ್ರಧಾನಿ ನಾಯಕರುಗಳನ್ನು ಕಂಡಿದ್ದರೂ
ಮತ ಸೌಹಾರ್ದಕ್ಕಾಗಿ ಮಾನವ ಮನಸ್ಸುಗಳನ್ನು ಪೋಣಿಸುವುದರಲ್ಲಿ ಜಾತಿ, ಧರ್ಮಗಳನ್ನು ಒಗ್ಗೂಡಿಸಿ, ಭಾವ್ಯಕ್ಯತೆಯನ್ನು ಬೆಸೆಯುವದರಲ್ಲಿ ವಿಫಲವಾಗಿರುವುದು ದೇಶದ ದುರಂತವೇ ಸರಿ. ದೇಶದಲ್ಲಿ ಆಡಳಿತ ಪಕ್ಷ, ಬದಲಾಗುತ್ತದೆಯೇ ವಿನಃ
ದೇಶದ ಆಂತರಿಕ ಸಮಸ್ಯೆ ಇನ್ನೂ ಬದಲಾಗದೆ ವಟವೃಕ್ಷದಂತೆ ಹೆಮ್ಮರವಾಗಿ ಬೆಳೆದು ನಿಂತಿವೆ.
ಯುವಕರು ಬಂಡೆ ಕಲ್ಲಿದ್ದಂತೆ.
ಯುವಕರು ಮನಸ್ಸು ಮಾಡಿದಲ್ಲಿ, ಒಂದಾದಲ್ಲಿ ಮಾತ್ರ ದೇಶ ಉಳಿಸಲು, ಬೆಳೆಸಲು ಸಾಧ್ಯ.
ಧರ್ಮದ ಆಧಾರದ ಮೇಲೆ ದೇಶ ಕಟ್ಟುವ ಕನಸು ಸಲ್ಲದು. ದೇಶ ಕಟ್ಟುವ ಕಾಯಕದಲ್ಲಿ ಯುವಕರನ್ನು ಹುರಿದುಂಬಿಸುವ ಕೆಲಸ ನಡೆಯಬೇಕಾಗಿದೆ.
ಮಹಾತ್ಮ ಗಾಂಧಿಯವರು ಕಂಡ “ಕನಸಿನ ಭಾರತ” ನನಸಾಗಿಸಲು ಯುವಕರು ಮತ್ತು ರಾಜ್ಯ,ರಾಷ್ಟ್ರ ರಾಜಕೀಯ ನಾಯಕರುಗಳು ಮುನ್ನಲೆಗೆ ಬರಬೇಕಾಗಿದೆ.
ಜಾತಿ ಧರ್ಮಗಳ ನಡುವಿನ ತಡೆಗೋಡೆಯನ್ನು ಒಡೆದರುಳಿಸಿ ಭವಿಷ್ಯದ ಭಾರತವನ್ನು ಕಟ್ಟುಲು ಯುವಕರನ್ನು ಪ್ರೇರೇಪಿಸುವ ಸಮಯೋಚಿತ ಭಾಷಣವನ್ನು ಪ್ರಧಾನಿ ಮೋದೀಜಿ ಅವರು ಸ್ವತಂತ್ರೋತ್ಸೋವದಂದು ನಡೆಸಬೇಕಾಗಿದೆ.
ಏಳು ದಶಕದ ಬಳಿಕವಾದರೂ ಮಹಾತ್ಮ ಗಾಂಧಿಯವರು ಕನಸು ಕಂಡ ಈ ಭವ್ಯ ಭಾರತ ಅರ್ಥಪೂರ್ಣ ಸ್ವತಂತ್ರ ದೇಶವಾಗಬೇಕು.
ಸ್ವತಂತ್ರ ಭಾರತದಲ್ಲಿ ಅತಂತ್ರಕ್ಕೊಳಗಾದ ದೇಶದ ಕಟ್ಟ ಕಡೆಯ ಧಮನಿತ,ಶೋಷಿತ, ಬಡಪಾಯಿಗೂ ಸ್ವತಂತ್ರ ದೊರಕಬೇಕು. ಗಾಂಧಿ ತಾತ ಹೇಳಿದಂತೆ.
ಮಟ ಮಟ ಮದ್ಯಹ್ನವೂ ನಡೆದಾಡಲು ಹಿಂಜರಿಯುವ ಸಹೋದರಿಯರು ಮಧ್ಯರಾತ್ರಿಯಲ್ಲೂ (ಅರೇಬಿಯನ್ ದೇಶಗಳಂತೆ) ಏಕಾಂಗಿಯಾಗಿ ನಡೆದಾಡುವ ನಿರ್ಭಿತಿಯ ವಾತಾವರಣ ಭಾರತದಲ್ಲಿ ನಿರ್ಮಾಣವಾಗ ಬೇಕು.
ಆಗಷ್ಟೇ ಮಹಾತ್ಮ ಗಾಂಧಿಯ, ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ.ರವರ ಕನಸಿನ ಭಾರತ ಸ್ವತಂತ್ರವಾಯಿತೆನ್ನಬಹುದು.
ಇಲ್ಲದಿದ್ದಲ್ಲಿ ಸ್ವತಂತ್ರ ಭಾರತ ಅನ್ನುವುದು ಹೆಸರಿಗೆ ಮಾತ್ರ ಸೀಮಿತ ಅಷ್ಟೇ.






