✍ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವಿಂದು ಸ್ವತಂತ್ರಗೊಂಡ ಸಂಭ್ರಮದಲ್ಲಿದೆ. 1947 ಆಗಸ್ಟ್ 15ರಂದು ಶುಕ್ರವಾರ ಈ ದೇಶವು ಬಿಳಿಯರ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿತು. ಭಾರತ ಸ್ವಾತಂತ್ರ್ಯದ ಹಿನ್ನೆಲೆಯನ್ನು ಮೆಲುಕು ಹಾಕಲು ಈ ಒಂದು ಬರಹದಿಂದ ಅಸಾಧ್ಯವೆಂಬುವುದನ್ನು ಪ್ರತ್ಯೇಕವಾಗಿ ತಿಳಿಸಬೇಕಾಗಿಲ್ಲ ಎಂದು ನನಗೆ ಗೊತ್ತು . ಆದರೂ ಕೆಲವೊಂದು ಕಾಣದ ಕೈಗಳಿಂದ ಇತಿಹಾಸದ ಪುಟಗಳು ಕಾಣೆಯಾಗಿರುವುದು ದೇಶದ ಸ್ವಾತಂತ್ರ್ಯದ ದುರಂತವೆನ್ನದೇ ವಿಧಿ ಇಲ್ಲ.!
ಮಹಾನರಾದ ಮಹಾತ್ಮ ಗಾಂಧೀಜಿಯವರ ನಾಯಕತ್ವದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮುಸ್ಲಿಮರ ಬಲು ದೊಡ್ಡ ಜನಸಂಖ್ಯೆ ಮುಂಚೂಣಿಯಲ್ಲಿ ಹೋರಾಟವನ್ನು ಜಾರಿಯಲ್ಲಿರಿಸಿದ್ದವು. ಮೌಲಾನ ಮುಹಮ್ಮದ್ ಅಲಿ ಜೌಹರ್ ಮತ್ತು ಅವರ ಸಹೋದರನಾದ ಶೌಕತ್ ಅಲಿ ಜೌಹರ್ ಅವರ ಸೇವೆಯು ಅಜರಾಮರವಾಗಿದೆ.
ಆ ಕಾಲದಲ್ಲಿ ಮುಸ್ಲಿಮರ ಪಾಲಿನ ಹಿರಿಯ ವಿದ್ವಾಂಸರೂ ಕೂಡ ಆಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ರವರನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ.
ಬ್ರಿಟಿಷರ ವಿರುದ್ಧ ನಡೆದ ಖಿಲಾಫತ್ ಚಳುವಳಿಯಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಪಾತ್ರವು ಬಹಳಷ್ಟು ಮುಖ್ಯವಾಗಿತ್ತು.
ದೇಶ ಸೇವೆಗೆ ಮೊದಲ ಆಧ್ಯತೆ
ಕೇರಳದಲ್ಲಿ ಬಿಳಿಯರ ವಿರುದ್ಧ ಹೋರಾಟ ಬಿಸಿ ಏರಿದಾಗ ದ್ವೀಪ ರಾಷ್ಟ್ರದಲ್ಲಿ ಮುದರ್ರಿಸರಾಗಿದ್ದ ಖ್ಯಾತ ವಿದ್ವಾಂಸರಾದ ಅಲಿ ಮುಸ್ಲಿಯಾರ್ ನೆಲ್ಲಿಕುತ್ತ್ ರವರು ಊರಿಗೆ ಬಂದು ಸ್ವಾತಂತ್ರ ಹೋರಾಟದ ನಾಯಕತ್ವ ವಹಿಸಿದ್ದರು.
ಇದು ಸಾವಿರದ ಒಂಬೈನೂರ ಎಪ್ಪತ್ತನೇ ಒಂದರಲ್ಲಿ ನಡೆದ ಘಟನೆಯಾಗಿದೆ. ಬ್ರಿಟಿಷ್ ಪೊಲೀಸರು ಅಲಿ ಮುಸ್ಲಿಯಾರ್ ಸಹಿತ 37 ಪ್ರಮುಖ ಮುಸ್ಲಿಮರನ್ನು ಬಂಧಿಸಿದರು. ಬ್ರಿಟಿಷರ ನ್ಯಾಯಾಲಯವು ಇವರಿಗೆ ಗಲ್ಲು ಶಿಕ್ಷೆ ತೀರ್ಪನ್ನು ನೀಡಿತ್ತು. ಆದರೆ ಅಲ್ಲಾಹನ ತೀರ್ಮಾನ ಬೇರೆಯೇ ಇತ್ತು. 1922 ಫೆಬ್ರವರಿ 17ರಂದು ಬೆಳಿಗ್ಗೆ ಸುಬಹಿ ನಮಾಜಿನ ಸುಜೂದಿನಲ್ಲಿ ಆ ಮಹಾತ್ಮರು ಮರಣ ಹೊಂದಿದರು. ಆಂಗ್ಲರು ನೇಣು ಶಿಕ್ಷೆ ಜಾರಿ ಮಾಡುವ ಮುನ್ನವೇ ಅಲ್ಲಾಹನು ಅವನ ಮಹಾತ್ಮರನ್ನು ಗೌರವಾದರ ಪೂರ್ವಕ ತನ್ನ ಕಡೆಗೆ ಬರಮಾಡಿಕೊಂಡನು.
ಇಲಿಯಾಗಿ ನೂರು ವರ್ಷ ಬದುಕುವುದಕ್ಕಿಂತ ಹುಲಿಯಾಗಿ ಒಂದು ದಿನ ಬಾಳುವವುದೇ ಒಳ್ಳೆಯದು ಎಂಬ ಸಂದೇಶವನ್ನು ಲೋಕಕ್ಕೆ ಸಾರಿದ ಹಝ್ರತ್ ಟಿಪ್ಪುಸುಲ್ತಾನ್ (ರ)ರವನ್ನು ದೇಶ ಸ್ನೇಹಿಯಾದ ಯಾರಿಗೂ ಮರೆಯಲು ಸಾಧ್ಯವಿಲ್ಲ.!
ಮಹಿಳೆಯರಲ್ಲೂ ಮೇಲೈಸಿದ ದೇಶಪ್ರೇಮ
ಹಝ್ರತ್ ಆಬಿದಾ ಬೇಗಂ ಎಂಬ ಮುಸ್ಲಿಂ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳಲ್ಲಿ ಹೇಳಿದ ಮಾತೊಂದು ಗಮನಾರ್ಹವಾಗಿದೆ : ಪ್ರೀತಿಯ ಮಕ್ಕಳೇ. ನಮ್ಮ ರಕ್ಷಣೆಗಾಗಿ ಈ ದೇಶದ ಬಿಡುಗಡೆಗಾಗಿ ಎಲ್ಲರೂ ಒಂದು ತಂಡವಾಗಿ ಒಗ್ಗೂಡಿದ್ದಾರೆ. ದೇಶದ ಸ್ವಾತಂತ್ರ್ಯವೇ ನಮ್ಮ ಗುರಿಯಾಗಿದೆ. ಆದುದರಿಂದ ನೀವು ಕೂಡ ಹೋರಾಟ ರಂಗಕ್ಕಿಳಿಯಬೇಕು. ಇಲ್ಲವಾದಲ್ಲಿ ಈ ತಾಯಿಯು ಮೊಲೆ ಹಾಲುಣಿಸಿದ್ದು ನಿಮಗೆ ಅನುವಧನೀಯವಾಗದು.!
ಪ್ರೀತಿಯ ವಾಚಕರೇ, ಇಲ್ಲೊಂದು ವಿಷಯವನ್ನು ಗಮನಿಸಬೇಕು. ಮುಸ್ಲಿಮ್ ಸ್ತ್ರೀಯರು ಯುದ್ಧದಂತಹ ಕಾರ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಆದುದರಿಂದಲೇ ಹಝ್ರತ್ ಆಬಿದಾ ಬೇಗಂರವರು ದೇಶದ ರಕ್ಷಣೆಗಾಗಿ ತನ್ನ ಇಬ್ಬರು ಕರುಳ ಕುಡಿಗಳನ್ನು ಕಳುಹಿಸಿಕೊಟ್ಟರು. ಮಾತ್ರವಲ್ಲ ಅದನ್ನು ಗಂಭೀರವಾಗಿಯೇ ಪರಿಗಣಿಸಿದ್ದರು. ಈ ರೀತಿಯ ಹೋರಾಟದ ಪರಿಣಾಮ ನಮ್ಮ ದೇಶವಿಂದು ಸ್ವಾತಂತ್ರ್ಯ ಗೊಂಡಿದೆ. ಆದರೆ ನಾವು ಮಾತ್ರ ಅತಂತ್ರರಾಗಿದ್ದೇವೆ.
ಬೇಲಿಯೇ ಹೊಲ ಮೇಯುತ್ತಿದೆ
ನಮ್ಮ ಆಡಳಿತವೇ ಇಂದು ವಿಭಜನೆಯ ಹಾದಿಯಲ್ಲಿ ಬಂದು ನಿಂತಿದೆ. ಏಕ ಸಿವಿಲ್ ಕೋಡನ್ನು ಪಾಸ್ ಮಾಡಿ ಅಲ್ಪಸಂಖ್ಯಾತರ ಹಕ್ಕನ್ನು ಕಬಲಿಸಲು ಸರ್ವ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಹಿಂದೆ ಕರ್ನಾಟಕ ಸರ್ಕಾರವು ಶ್ರೀಮಾನ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಧಿಭಾಗ್ಯ ಯೋಜನೆಯನ್ನು ಸ್ಥಾಪಿಸಿದಾಗ ಅಲ್ಪಸಂಖ್ಯಾತರನ್ನು ಓಲೈಸಲು ಈ ರೀತಿಯ ಯೋಜನೆಯನ್ನು ಜಾರಿಗೊಳಿಸುವುದು ತಾರತಮ್ಯವೆನ್ನುತ್ತಾ ಬಿಜೆಪಿಯು ಪ್ರತಿಭಟನೆಯ ದಾರಿಯಲ್ಲಿತ್ತು. ಆದರೆ ಇದೀಗ ಜಮ್ಮು-ಕಾಶ್ಮೀರದಲ್ಲಿ ಅಲ್ಲಿನ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ವಿವಿಧ ರೀತಿಯ ಯೋಜನೆಗಳನ್ನು ಬಿಡುಗಡೆಗೊಳಿಸಲಿಸುವತ್ತಾ ಹೆಜ್ಜೆ ಇಟ್ಟಿದೆ. ವ್ಯತ್ಯಾಸವಿಷ್ಟೇ ಕರ್ನಾಟಕದ ಅಲ್ಪಸಂಖ್ಯಾತರು ಮುಸ್ಲಿಮರಾಗಿದ್ದರು. ಜಮ್ಮು-ಕಾಶ್ಮೀರದ ಅಲ್ಪಸಂಖ್ಯಾತರು ಹಿಂದೂ ಧರ್ಮದವರಾಗಿದ್ದಾರೆ. ಇದರ ಹಿಂದಿರುವ ಅಜೆಂಡಾವು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಿಂದುಗಳು ಮಾತ್ರ ಸಂಪೂರ್ಣವಾಗಿ ಸುರಕ್ಷಿತರಾಗಿ ಭಾರತದಲ್ಲಿ ಬದುಕುವುದು. ಇತರ ಧರ್ಮದವರು ಹಿಂದುಗಳಿಗೆ ಶಿರಬಾಗಿ ನಿಲ್ಲುವುದು.
ಅದರಲ್ಲೂ ಮುಸ್ಲಿಂ ಸಮುದಾಯದವರ ಬದುಕಿಗೆ ಕೊಳ್ಳಿ ಇಡುವುದನ್ನು ನೋಡಿ ಆನಂದ ಪಡಲು ಕಾಯುತ್ತಿರುವ ಕೆಲವೊಂದು ಕೋಮು ಸಂಘಟನೆಗಳ ಕಾರ್ಯಕರ್ತರನ್ನು ತೃಪ್ತಿಪಡಿಸಿ ಸುಪರ್ದಿಯಲ್ಲೇ ನಿಲ್ಲಿಸಲು ಇದಕ್ಕಿಂತ ದೊಡ್ಡ ಯೋಜನೆಗಳು ಸದ್ಯ ಸರ್ಕಾರಕ್ಕಿಲ್ಲ.
ಒಟ್ಟಿನಲ್ಲಿ ಮುಸ್ಲಿಮರ ಸ್ವಾತಂತ್ರ್ಯವು ಇಲ್ಲಿ ದಿನನಿತ್ಯ ಮರೀಚಿಕೆಯಾಗುತ್ತಿದೆ. ನಮ್ಮನ್ನು ಭಾರತ ಬಿಟ್ಟು ತೊಲಗಲು ಇಲ್ಲಿನ ಆಡಳಿತ ವರ್ಗವೇ ಕಂಡೀಷನ್ ಕೊಡುವ ದಿನ ಬರಲು ದೂರವಿಲ್ಲವೆಂಬುವುದನ್ನು ಮನದಟ್ಟು ಮಾಡಬೇಕಾಗಿದೆ.
Masha allha 👍