janadhvani

Kannada Online News Paper

ಬೆಳಗಾವಿ: ನಿರಾಶ್ರಿತರ ಕೇಂದ್ರದಲ್ಲಿ ಎಸ್ಸೆಸ್ಸೆಫ್ ನಾಯಕರು

ಬೆಳಗಾವಿ: ಉತ್ತರ ಕರ್ನಾಟಕದಾದ್ಯಂತ ಜಲಪ್ರಳಯದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅಪಾರ ಸಾವು ನೋವುಗಳು ಹಾಗೂ ಹೇರಳವಾದ ನಷ್ಟ ಸಂಭವಿಸಿದೆ.

ನಿರಾಶ್ರಿತ ಕೇಂದ್ರಗಳಲ್ಲಿರುವ ಸಹಸ್ರಾರು ಜನರಿಗೆ ಸಹಾಯಹಸ್ತವನ್ನು ಚಾಚಲು ಹಾಗೂ ಸಂತೃಸ್ತರಿಗೆ ಸಾಂತ್ವನ ವನ್ನು ನೀಡಲು ರಾಜ್ಯ ಎಸ್ಸೆಸ್ಸೆಫ್ ನಾಯಕರು ಹಾಗೂ ಉತ್ತರ ಕರ್ನಾಟಕದ ಎಸ್ಸೆಸ್ಸೆಫ್ ಕಾರ್ಯಕರ್ತರು ಬೆಳಗಾವಿ ತಲುಪಿದ್ದು ಸಂಪೂರ್ಣ ಜಲಾವೃತ ವಾಗಿರುವ ಗೋಕಾಕ, ಕೊಳವಿ, ಖನಗಾಂವ್, ಚಿಗಡೋಳ, ಕಲಾರಗೊಪ್ಪ, ಮೆಲವೊಂಕಿ, ಹುದಗಟ್ಟಿ ಮುಂತಾದ ಪ್ರದೇಶಗಳಲ್ಲಿ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಸಹಸ್ರಾರು ಜನರಿಗೆ ಸಹಾಯಹಸ್ತವನ್ನು ನೀಡಿ ಸಾಂತ್ವನ ಹೇಳಲಾಯಿತು.

ಎಸ್ಸೆಸ್ಸೆಫ್ ಅರಫಾ ಹಾಗೂ ಈದ್ ದಿನದಂದು ಕರೆನೀಡಿರುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಬಟ್ಟೆಬರೆಗಳು, ಪಾತ್ರೆ ಗಳು, ಬೆಡ್ ಶೀಟ್ ಮುಂತಾದವುಗಳನ್ನು ಸಂಗ್ರಹಿಸಿ ಶೀಘ್ರದಲ್ಲೇ ತಲುಪಿಸಲಿದ್ದೇವೆ ಎಂದು ಭರವಸೆ ನೀಡಲಾಗಿದೆ.
ತಂಡದಲ್ಲಿ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಕೋಶಾಧಿಕಾರಿ ರವೂಫ್ ಖಾನ್ ಉಡುಪಿ, ಕಾರ್ಯದರ್ಶಿ ನವಾಝ್ ಭಟ್ಕಳ್, ಕೊಪ್ಪಳ ಜಿಲ್ಲಾಧ್ಯಕ್ಷ ಮೆಹಬೂಬ್ ಬಸವಾಪಟ್ಟಣ, ಹಾವೇರಿ ಜಿಲ್ಲಾ ನಾಯಕರಾದ ಯಾಸೀನ್ ಸಖಾಫಿ, ಇಕ್ಬಾಲ್ ರಾಣಿ ಬೆನ್ನೂರು, ಫೈರೋಜ್ ರಾಣಿಬೆನ್ನೂರು, ಫೈರೋಜ್ ಹಾವೇರಿ, ಗದಗ ಜಿಲ್ಲಾ ಕಾರ್ಯದರ್ಶಿ ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ, ದಾವಣಗೆರೆ ಜಿಲ್ಲಾನಾಯಕರಾದ ಶರೀಫ್ ಸಖಾಫಿ, ನವಾಝ್ ಸಖಾಫಿ, ಹಾಜಿ ಸಾಬ್ ಬೆಳಗಾವಿ ಮುಂತಾದವರು ತಂಡದಲ್ಲಿದ್ದಾರೆ.

error: Content is protected !! Not allowed copy content from janadhvani.com