ಜಿದ್ದಾ: ಅಝೀಝಿಯಾದ ಭಾರತೀಯ ಹಜ್ ಮಿಷನ್ ಕಾರ್ಯಾಲಯದಲ್ಲಿ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾದ ಜನರಲ್ ಸೆಕ್ರೆಟರಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರು ಕೌನ್ಸಿಲ್ ಜನರಲ್ ಮುಹಮ್ಮದ್ ನೂರ್ ರಹ್ಮಾನ್ ಶೈಖ್ ಅವರೊಂದಿಗೆ ಮಾತುಕತೆ ನಡೆಸಿದರು.
ಎರಡು ಲಕ್ಷಗಳಷ್ಟು ಭಾರತೀಯ ಹಜ್ಜಾಜ್‌ಗಳಿಗೆ ಹಜ್ ಮಿಷನ್ ನೀಡುತ್ತಿರುವ ಸೇವೆಯು ಅಭಿನಂದನಾರ್ಹ ಎಂದು ಈ ವೇಳೆ ಕಾಂತಪುರಂ ಸಿ.ಜೆ. ಅವರಿಗೆ ತಿಳಿಸಿದರು. ಹಜ್ಜಾಜ್‌ಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದ ಸಿ.ಜೆ., ಇನ್ನಷ್ಟು ಸೇವೆಗಳನ್ನು ಒದಗಿಸುವ ಬಗ್ಗೆ ಪ್ರಯತ್ನ ಸಾಗಿದೆ ಎಂದರು.
ಹಜ್ಜಾಜ್‌ಗಳಿಗೆ ಸೇವೆ ನೀಡುತ್ತಿರುವ ಕೇರಳೀಯ ಸ್ವಯಂಸೇವಕರಿಗೆ ಹಜ್ ಮಿಷನ್ ವತಿಯಿಂದ ಅಝೀಝಿಯಾದಲ್ಲಿ ವಾಸ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಮುಹಮ್ಮದ್ ನೂರ್, ಕಾಂತಪುರಂ ಅವರಿಗೆ ತಿಳಿಸಿದರು. ಈ ವೇಳೆ ಹಜ್ ಕೌನ್ಸಿಲ್ ವೈಸ್ ಜನರಲ್ ಸಾಬಿರ್ ಅವರೊಂದಿಗೂ ಕಾಂತಪುರಂ ಉಸ್ತಾದ್ ಚರ್ಚೆ ನಡೆಸಿದರು.