janadhvani

Kannada Online News Paper

ಅಪಘಾತ: ಕೋಮಾವಸ್ಥೆಯಲ್ಲಿದ್ದ ಮಗು ಸೌದಿ ಕೆಸಿಎಫ್ ನೆರವಿನಿಂದ ತಾಯ್ನಾಡಿಗೆ

ರಿಯಾದ್ : ರಿಯಾದ್ ಬತ್ತಹ ಸಮೀಪ ಮಾರ್ಚ್ 29 , 2019 ರಂದು ನಡೆದ ವಾಹನ ಅಪಘಾತದಲ್ಲಿ ಗಾಯಗೊಂಡು, ಕೋಮಾವಸ್ಥೆಯಲ್ಲಿದ್ದ ಮಂಗಳೂರಿನ ರಿಯಾಜ್ ಎಂಬವರ ಮಗ ರಿದ್ವಾನ್ (12 ವರ್ಷ)ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಊರಿಗೆ ತಲುಪಿಸಲಾಯಿತು.

ಘಟನೆ : ರಿಯಾದ್ನಲ್ಲಿ ಮಾರ್ಚ್ 29 ರಂದು ಒಂದು ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂತಿರುಗುವಾಗ ಮುಂದಿನಿಂದ ಸಾಗುತ್ತಿದ್ದ ಮಿನಿ ಟ್ರಕ್ ವಾಹನವು ಅಚಾನಕ್ಕಾಗಿ ಟ್ರ್ಯಾಕ್ ಬದಲಾಯಿಸಿದ ಕಾರಣ ಆ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ, ರಿಯಾಜ್ ಚಲಾಯಿಸುತ್ತಿದ್ದ
ವಾಹನದ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಡಿವೈಡರ್ಗೆ ಬಡಿದು ಪಲ್ಟಿಯಾಯಿತು.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಿಯಾಜ್ , ಪತ್ನಿ ಸಹನಾಜ್ , ಮಕ್ಕಳಾದ ರಿದ್ವಾನ್ , ರಿಶಾನ್, ರಿಫಾಸ್ ಮತ್ತು ತಾಯಿ ಬಿಫಾತಿಮಾ ಎಂಬವರನ್ನು ರೆಡ್ ಕ್ರಾಸ್ ಆಂಬುಲೆನ್ಸ್ ಸಹಾಯದೊಂದಿಗೆ ಪೊಲೀಸರು ರಿಯಾದ್ ಮಲಾಜ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಅಪಘಾತದ ರಭಸಕ್ಕೆ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಪ್ರಜ್ಞೆ ಕಳಕೊಂಡಿದ್ದ ರಿದ್ವಾನ್ ನನ್ನು ಬಿಟ್ಟು ಉಳಿದವರು 2 ವಾರಗಳ ಚಿಕಿತ್ಸೆಯ ನಂತರ ಚೇತರಿಸಿಗೊಂಡಿದ್ದರು.ಕೈ ಕಾಲುಗಳಿಗೆ ಹೆಚ್ಚಿನ ಗಾಯವಾದ ಕಾರಣ ತಾಯಿ ಬೀಫಾತಿಮರ ಅವರನ್ನು ಸ್ಟ್ರೆಚರ್ ನ ಸಹಾಯದೊಂದಿಗೆ ಊರಿಗೆ ಕಳುಹಿಸಲಾಯಿತು.

ಘಟನಾ ವಿವರವನ್ನರಿತ ರಿಯಾದ್ KCF ಕಾರ್ಯಕರ್ತರು, ಆಸ್ಪತ್ರೆಯಲ್ಲಿದ್ದ ಕುಟುಂಬವನ್ನು ಭೇಟಿಯಾಗಿ ರಕ್ತದಾನ ಸಹಿತ ಎಲ್ಲಾ ನೆರವನ್ನು ನೀಡಿದರು.

ಖಾಸಗಿ ಆಸ್ಪತ್ರೆಯಲ್ಲಿ 2 ವಾರಗಳ ಚಿಕಿತ್ಸೆಯ ನಂತರವೂ ಯಾವುದೇ ಬದಲಾವಣೆ ಕಾಣದ ಕಾರಣ ಕೋಮಾವಸ್ಥೆಯಲ್ಲಿದ ರಿದ್ವಾನ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಿಯಾದ್ ನಲ್ಲಿರುವ ಸನದ್ ಆಸ್ಪತ್ರೆ ಗೆ ದಾಖಲಿಸಿ ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ, ಅಲ್ಪ ಮಟ್ಟಿಗೆ ಚೇತರಿಕೆ ಕಂಡುಬಂದರೂ ಪೂರ್ಣವಾಗಿ ಚೇತರಿಸಿಕೊಳ್ಳದೆ ಕಳೆದ 2 ತಿಂಗಳಿನಿಂದ ಕೋಮಾವಸ್ಥೆಯಲ್ಲೇ ಮುಂದುವರಿದಿತ್ತು.

ಕುಟುಂಬದ ಆರೋಗ್ಯವಿಮೆ ( ಇನ್ಸೂರೆನ್ಸ್ ) ಮುಗಿದ ಕಾರಣ ಉತ್ತಮ ಚಿಕಿತ್ಸೆಗಾಗಿ ಊರಿಗೆ ಕೊಂಡುಹೋಗಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ KCF ರಾಷ್ಟೀಯ ನಾಯಕರಾದ ಹಂಝ ಮೈಂದಾಳ ಮತ್ತು ರಿಯಾದ್ ಝೋನ್ ನಾಯಕರು ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತ ಶಿಹಾಬ್ ಕೊಟ್ಟುಕಾಡ್ ಅವರ ಸಹಕಾರದೊಂದಿಗೆ ಸತತವಾಗಿ ಪ್ರಯತ್ನಿಸಿ , ರಿಯಾದ್ ಇಂಡಿಯನ್ ಎಂಬಸ್ಸಿಯನ್ನು ಸಂಪರ್ಕಿಸಿ ಅದೇ ರೀತಿ ದುಬೈಯಲ್ಲಿ ಕಾರ್ಯನಿರ್ವಹಿಸುವ Univesal medical transport service team ಸ್ವಯಂ ಸೇವಾ ಸಂಘಟನೆಯ ಸಹಕಾರದಿಂದ ವೆಂಟಿಲೇಟರ್ , ಒಬ್ಬರು ಡಾಕ್ಟರ್ ಮತ್ತು ಒಂದು ನರ್ಸ್ ಜೊತೆಯಲ್ಲಿ ಮಗುವನ್ನು ಕೇರಳದ ಕೊಚ್ಚಿ ನಿಡುಂಬಾಷೇರಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಅಲ್ಲಿಂದ ಆಂಬುಲೆನ್ಸ್ ಮುಖಾಂತರ ಮಂಗಳೂರು KMC ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಎಲ್ಲಾ ಕಾರ್ಯಾಚರಣೆಗೆ KCF ಗೆ
ನಿರಂತರವಾಗಿ ಮಾರ್ಗ ದರ್ಶನ ಮತ್ತು ಮುಂದೆ ನಿಂತು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪದ್ಮಶ್ರೀ ಶಿಹಾಬ್ ಕೊಟ್ಟುಕಾಡ್ ಮತ್ತು ಇತರ ಎಲ್ಲರಿಗು ಧನ್ಯವಾದವನ್ನು ಸಮರ್ಪಿಸುತ್ತಿದ್ದು. ಮುಂದೆಯೂ ಅನಿವಾಸಿಗಳ ಅನೇಕ ರೀತಿಯ ಸಹಾಯಕ್ಕೆ ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ.

ವರದಿ : ಸೌದಿ ರಾಷ್ಟೀಯ ಪಬ್ಲಿಕೇಷನ್ ಇಲಾಖೆ

error: Content is protected !! Not allowed copy content from janadhvani.com