ರಿಯಾದ್: ಸೌದಿಯಲ್ಲಿ ಸ್ವದೇಶೀಕರಣ ಶಕ್ತಿಯುತವಾಗಿ ಜಾರಿಯಲ್ಲಿದ್ದರೂ, ವಿದೇಶೀಯರಿಗೆ ಕೆಲಸದ ವಿಸಾ ಅನುಮತಿಸುತ್ತಿರುವುದಾಗಿ ವರದಿಯಾಗಿದೆ. ಈ ವರ್ಷದ ಪ್ರಾರಂಭದಿಂದ ನಾಲ್ಕು ಲಕ್ಷ ವಿದೇಶೀ ಕಾರ್ಮಿಕರನ್ನು ರೀಕ್ರೂಟ್ ಮಾಡಲಾಗಿದೆ.
ಸೌದಿ ಜನರಲ್ ಸ್ಟಾಟಿಸ್ಟಿಕ್ ಅಥಾರಿಟಿ ಕಳೆದ ದಿವಸ ಹೊರಡಿಸಿದ ಅರ್ಧವಾರ್ಷಿಕ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಈ ವರ್ಷದ ಪ್ರಥಮ ಮೂರು ತಿಂಗಳುಗಳಲ್ಲಿ 3,90,000 ಕಾರ್ಮಿಕರನ್ನು ವಿವಿಧ ಹುದ್ದೆಗಳಿಗೆ ರಿಕ್ರೂಟ್ ಮಾಡಲಾಗಿದೆ.
ವೈಯಕ್ತಿಕ ಅವಶ್ಯತೆಗಳಿಗಾಗಿ 2,29,457, ಖಾಸಗಿ ವಲಯದ ಸ್ಥಾಪನೆಗಳಿಗೆ 1,43,658, ಸರಕಾರಿ ವಲಯಕ್ಕೆ 17,686 ಕೆಲಸದ ವಿಸಾ ಅನುಮತಿಸಲಾಗಿದೆ.
ಗೃಹ, ಕೃಷಿ ವಲಯ ಮತ್ತು ಒಂಟಿ ವ್ಯಕ್ತಿ ನಡೆಸುವ ಸಣ್ಣಪುಟ್ಟ ಸ್ಥಾಪನೆಗಳಿಗೆ ಶೇ. 58.8 ಕಾರ್ಮಿಕರನ್ನು ರಿಕ್ರೂಟ್ ಮಾಡಲಾಗಿದೆ. 1,25,178 ಪುರುಷರು, 1,04,279 ಮಹಿಳೆಯರು ವೈಯಕ್ತಿಕ ವಲಯಕ್ಕೆ ಕೆಲಸಕ್ಕೆ ಬಂದಿಳಿದಿದ್ದಾರೆ.