ಮಕ್ಕಾ: ಮಾರ್ಚ್ 15 ಅನ್ನು ಇಸ್ಲಾಮೋಫೋಬಿಯಾ ವಿರುದ್ಧ ದಿನವನ್ನಾಗಿ ಆಚರಿಸಲು ಇಸ್ಲಾಮಿಕ್ ಶೃಂಗಸಭೆ ತಿಳಿಸಿದೆ. ವಿಶ್ವಸಂಸ್ಥೆ ಮತ್ತಿತರ ಸಂಘನೆಗಳೊಂದಿಗೆ ಈ ಬೇಡಿಕೆಯನ್ನು ಮುಂದಿರಿಸಿದೆ. ಮತೀಯವಾದ, ಭಯೋತ್ಪಾದನೆ ಮುಂತಾದವುಗಳ ವಿರುದ್ಧ ಕಠಿಣವಾದ ಕ್ರಮಗಳಿಗೆ ಆಹ್ವಾನ ನೀಡುತ್ತಾ ಶೃಂಗಸಭೆಯು ಈ ತೀರ್ಮಾನ ಕೈಗೊಂಡಿದೆ.
“ಮಾರ್ಚ್ 15 ಇಸ್ಲಾಮೋಫೋಬಿಯಾ ವಿರುದ್ಧ ದಿನ”
ವಿಶ್ವದಾದ್ಯಂತ ಬೆಳೆಯುತ್ತಿರುವ ಇಸ್ಲಾಮ್ ಬಗೆಗಿನ ಭೀತಿಯು ನಿಯಂತ್ರಣಾತೀತವಾಗಿದೆ. ಇಸ್ಲಾಮಿನ ಕುರಿತು ಅಜ್ಞಾನವೇ ಈ ಎಲ್ಲಾ ಭೀತಿಗೂ ಕಾರಣವಾಗಿದೆ. ಇಸ್ಲಾಮಿನ ಮಿತವಾದ ಸಾಮೀಪ್ಯ ಮತ್ತು ಸಹಿಷ್ಣುತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಪಂಡಿತ ಸಮ್ಮೇಳನವು ಕೇಳಿಕೊಂಡಿದ್ದು, ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಇಸ್ಲಾಮ್ ವರ್ಲ್ಡ್ ಲೀಗ್ ತೀರ್ಮಾನ ಕೈಗೊಂಡಿದೆ.
ಇದರ ವಿರುದ್ದ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ. ಇದರ ಭಾಗವಾಗಿ ಅಂತಾರಾಷ್ಟ್ರ ಇಸ್ಲಾಮೋಫೋಬಿಯಾ ವಿರುದ್ಧ ದಿನವನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಶೃಂಗಸಭೆಗೆ ಮುಂಚಿತವಾಗಿ ಜರುಗಿದ ವಿಶ್ವ ಪಂಡಿತ ಸಮ್ಮೇಳನದಲ್ಲೂ ಇಸ್ಲಾಮೋಫೋಬಿಯಾದ ವಿರುದ್ಧ ವಿಶ್ವಮಟ್ಟದ ಸಂವಾದ ಬೇಕೆನ್ನುವ ಅಭಿಪ್ರಾಯ ಕೇಳಿಬಂದಿತ್ತು.