janadhvani

Kannada Online News Paper

ವಿವಿಪ್ಯಾಟ್ ಎಣಿಕೆ: ಅಫಿಡವಿಟ್ ಗೆ ಪ್ರತಿಕ್ರಯಿಸಲು ವಿಪಕ್ಷಗಳಿಗೆ ವಾರದ ಗಡುವು

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ವಿವಿಪ್ಯಾಟ್ ಎಣಿಕೆ ಕುರಿತು ಚುನವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್ ಗೆ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡಬೇಕೆಂದು  21 ಪ್ರತಿಪಕ್ಷ ನಾಯಕರಿಗೆ ಸುಪ್ರೀಂ ಕೋರ್ಟ್ ಹೇಳಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟ ಮುಂಬರುವ ಲೋಕಸಭೆ ಚುನಾವಣೆಯ ಮತಎಣಿಕೆ ವೇಳೆ  ಪ್ರತಿ ಅಸೆಂಬ್ಲಿ ಕ್ಷೇತ್ರದ ಕನಿಷ್ಠ 50 ಪ್ರತಿಶತದಷ್ಟು ವಿವಿಪ್ಯಾಟ್ ಗಳನ್ನು ಎಣಿಕೆ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದವು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಮುಂದಿನ ಸೋಮವಾರದೊಳಗೆ ಆಯೋಗದ ಅಫಿಡವಿಟ್ ಗೆ ಪ್ರತ್ಯುತ್ತರ ಸಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕರ ಪರ ವಕೀಲ  ಎ. ಎಂ. ಸಿಂಘ್ವಿ ಅವರಿಗೆ ಆದೇಶಿಸಿದೆ.ಇದಕ್ಕೆ ಮುನ್ನ ಅಫಿಡವಿಟ್ ಸಲ್ಲಿಸಿದ್ದ ಚುನಾವಣಾ ಆಯೋಗ ಶುಕ್ರವಾರ ಪ್ರತಿಪಕ್ಷ ನಾಯಕರ ಮನವಿಯನ್ನು ವಜಾ ಮಾಡಲು ಕೇಳಿತ್ತು.

ಪ್ರತಿವಾದಿಗಳು ವಿವಿಪ್ಯಾಟ್ ಎಣಿಕೆ ಹೆಚ್ಚಳ ಮಾಡಲು ಕೇಳುತ್ತಿದ್ದಾರೆ. ಆದರೆ ಪ್ರತಿ ಮತಗಟ್ಟೆಯ ಶೇ. 50ರಷ್ಟು ವಿವಿಪ್ಯಾಟ್ ಎಣಿಕೆ ಮಾಡಬೇಕಾದರೆ ಅದಕ್ಕೆ ಆರು ವಾರಗಳ ಕಾಲಾವಧಿ ಹಿಡಿಯಲಿದೆ. ಅಲ್ಲದೆ ಪ್ರತಿವಾದಿಗಳು ವಿವಿಪ್ಯಾಟ್ ಎಣಿಕೆ ಬಗ್ಗೆ ಕೇಳುತ್ತಿದ್ದು ಇದಕ್ಕೆ ಅವರು ಯಾವುದೇ ಬಲವಾದ ಕಾರಣ ನೀಡುವಲ್ಲಿ ಅಸಮರ್ಥರಾಗಿದ್ದಾರೆ. ಎಂದು ಆಯೋಗ ತನ್ನ ಅಫಿಡವಿಟ್ ನಲ್ಲಿ ಹೇಳೀದೆ. ಸಾಕಷ್ಟು ಪರೀಕ್ಷೆಗಳ ನಂತರ ಈ ವ್ಯವಸ್ಥೆ ಜಾರಿಗೆ ಬಂದಿದ್ದು ಇವಿಎಂ ಮೂಲಕ ಮತದಾನ, ವಿವಿಪ್ಯಾಟ್ ಬಳಕೆ ಅತ್ಯಂತ ಸೂಕ್ತ ಕ್ರಮವಾಗಿದೆ, ಇದರಲ್ಲಿ ಯಾವ ವಂಚನೆ ನಡೆಯುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com