ದುಬೈ: ದುಬೈನ ಶೈಖ್ ಝಾಯಿದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ರಸ್ತೆಯ ವೇಗಮಿತಿಯನ್ನು ಹೆಚ್ಚಿಸಲಾಗಿದೆ ಎಂದು ದುಬೈ ರಸ್ತೆ ಸಾರಿಗೆ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ದುಬೈ-ಅಲ್ಐನ್ ರಸ್ತೆ ಮತ್ತು ಅಲ್ ಯಲಾಯ್ಸ್ ರಸ್ತೆಯ ಮಧ್ಯದಲ್ಲಿನ ಶೈಖ್ ಝಾಹಿದ್ ಹಮ್ದಾನ್ ಅಲ್ ನಹ್ಯಾನ್ ರಸ್ತೆಯ ಗರಿಷ್ಠ ವೇಗ ಮಿತಿಯನ್ನು 90 ರಿಂದ ಗಂಟೆಗೆ 100 ಕಿ.ಮೀ.ಯಾಗಿ ಹೆಚ್ಚಿಸಲಾಗಿದ್ದು, ಅಧ್ಯಯನದ ಆಧಾರದ ಮೇಲೆ, ಆರ್‌ಟಿಎ ಮತ್ತು ದುಬೈ ಪೋಲಿಸ್ ಜನರಲ್ ಹೆಡ್ ಕ್ವಾರ್ಟರ್ಸ್ ಈ ನಿರ್ಧಾರ ತೆಗೆದುಕೊಂಡಿದೆ.
ರೋಡ್ ಟ್ರಾನ್ಸ್ ಪೋರ್ಟ್ ಮತ್ತು ರೋಡ್ ಏಜೆನ್ಸಿಯ ಸಿಇಒ ಮೈತಾ ಬಿನ್ ಅದಾಯ್ ಈ ಬಗ್ಗೆ ಮಾತನಾಡಿ, “ನಾವು ಈ ಕುರಿತು ವಿವರವಾದ ಅಧ್ಯಯನ ನಡೆಸಿದ್ದೇವೆ ಎಂದರು. ವೇಗದ ಕ್ಯಾಮರಗಳು ಗಂಟೆಗೆ 120 ಕಿ.ಮೀ.ಯನ್ನು ಅನುಸಾರವಾಗಿ ಕಾರ್ಯಾಚರಣೆ ಮಾಡುವಂತೆ ಕ್ರಮೀಕರಿಸಲಾಗುವುದು ಎಂದರು.
ಸಹಾಯಕ ಕಮಾಂಡರ್ ಮೇಜರ್ ಜನರಲ್ ಮುಹಮ್ಮದ್ ಸೈಫ್ ಅಲ್ ಝಫೀನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ದುಬೈಯ ರಸ್ತೆ ಸುರಕ್ಷತೆ ಬಗ್ಗೆ ಸರಕಾರವು ತಳೆದ ಕ್ರಮದ ಅನುಸಾರವಾಗಿ
ದುಬೈ ಪೊಲೀಸ್ ಮತ್ತು ಆರ್‌ಟಿಎ ನಿರಂತರವಾಗಿ ರಸ್ತೆಗಳ ಸಂಚಾರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿದೆ ಎಂದರು.