ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಮೂರು ದಿನಗಳ ಲೋಕಸಭಾ ಚುನಾವಣೆಯ ಪ್ರಚಾರವನ್ನು ಸೋಮವಾರ ಪ್ರಯಾಗ್ ರಾಜ್ ನಿಂದ ಆರಂಭಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ “ನಾನು ಹಲವಾರು ವರ್ಷಗಳ ಕಾಲ ಮನೆಯಲ್ಲಿದ್ದೆ.ಈಗ ನಾನು ಸಂವಿಧಾನವು ಅಪಾಯವನ್ನು ಎದುರಿಸುತ್ತಿರುವುದರಿಂದ ಮನೆಯಿಂದ ಹೊರಬರಬೇಕಾಯ್ತು” ಎಂದರು.
“ಸರ್ಕಾರ ಈಗ ಉದ್ಯಮಿಗಳನ್ನು ಮಾತ್ರ ಕೇಂದ್ರೀಕರಿಸಿದೆ. ಅದರಲ್ಲಿ ಚೌಕಿದಾರ್ ಕೂಡ ಪಾಲುದಾರನಾಗಿದ್ದಾನೆ. ಜನರ ಸಮಸ್ಯೆಗಳಿಗೆ ಸರ್ಕಾರ ಕಿವಿಗೊಡದೆ ಕಿವುಡನಾಗಿದೆ.ಯಾರಾದರೂ ಅವರ ವಿರುದ್ಧ ಧ್ವನಿ ಎತ್ತಿದ್ದರೆ ಅಂತವರನ್ನು ಹತ್ತಿಕ್ಕಲಾಗುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಪ್ರವಾಸದ ವೇಳೆ ಪ್ರಿಯಾಂಕಾ ಗಾಂಧಿ ಪ್ರಯಾಗ್ ರಾಜ್, ಭದೊಹಿ, ಮಿರ್ಜಾಪುರ್ ಮತ್ತು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಬುಧುವಾರದಂದು ಸಂಜೆ ವಾರಾಣಸಿ ಅಸ್ಸಿ ಘಾಟ್ ಹಾಗೂ ದಶಾಶ್ವಮೇಧ ಘಾಟ್ ನಲ್ಲಿ ಅವರು ತಮ್ಮ ಪ್ರವಾಸವನ್ನು ಅಂತ್ಯಗೊಳಿಸಲಿದ್ದಾರೆ.
ತನ್ನ ಪ್ರವಾಸದ ಸಮಯದಲ್ಲಿ ಅವರು ಪ್ರಜಾಗ್ರಾಜ್, ಭದೊಹಿ, ಮಿರ್ಜಾಪುರ್ ಮತ್ತು ವಾರಣಾಸಿ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಒಳಗೊಳ್ಳಲಿದ್ದಾರೆ. ಬುಧವಾರ ಸಂಜೆ ವಾರಣಾಸಿಯ ಅಸಿ ಘಾಟ್ ಮತ್ತು ದಶಾಶ್ವಮೇಧ ಘಾಟ್ನಲ್ಲಿ ಅವರ ಪ್ರಯಾಣ ಮುಕ್ತಾಯವಾಗುತ್ತದೆ.ಪ್ರಿಯಾಂಕಾ ಗಾಂಧಿ ಭಾನುವಾರದಂದು ಲಕ್ನೋದಲ್ಲಿ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ನಂತರ ತಡ ರಾತ್ರಿ ಪ್ರಯಾಗ್ ರಾಜ್ ಗೆ ಆಗಮಿಸಿದರು. ತಮ್ಮ ಪ್ರವಾಸದ ವೇಳೆ ಅವರು ಪಕ್ಷದ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ