ಮಕ್ಕಾ: ಮಕ್ಕಾ ಮತ್ತು ಮದೀನಾದಲ್ಲಿ ದಾರಿತಪ್ಪುವ ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳನ್ನು ತಮ್ಮ ನಿವಾಸಗಳಿಗೆ ತಲುಪಿಸಲು ಸಂಸ್ಥೆಗಳನ್ನು ನಿಯುಕ್ತಿಗೊಳಿಸಲಾಗುತ್ತಿದೆ. ಇವುಗಳ ಸೇವೆಯು ದಿನದ ಇಪ್ಪತ್ತ ನಾಲ್ಕು ಗಂಟೆಗಳು ಲಭ್ಯವಿರಲಿದ್ದು, ಯೋಜನೆಯು ಹಜ್ ಮತ್ತು ಉಮ್ರಾ ಸಚಿವಾಲಯದಡಿ ಜಾರಿಯಾಗಲಿದೆ. ತಪ್ಪೆಸಗುವ ಸೇವಾ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ.
ಮಕ್ಕಾ ಮತ್ತು ಮದೀನಾಗಳಿಗೆ ಪ್ರಥಮ ಬಾರಿ ಭೆಟಿ ನೀಡುವ ಯಾತ್ರಾರ್ಥಿಗಳಿಗೆ ದಾರಿ ತಪ್ಪುವ ಸಹಜವಾಗಿ ನಡೆಯುತ್ತದೆ.ಅಂತವರನ್ನು ತಮ್ಮ ನಿವಾಸದತ್ತ ಮರಳಿಸುವ ಸಲುವಾಗಿ ಹಜ್ ಉಮ್ರಾ ಸಚಿವಾಲಯವು ಹೊಸ ಸಂಸ್ಥೆಗಳನ್ನು ರೂಪುಗೊಳಿಸಲು ಯೋಜಿಸುತ್ತಿದೆ.
ಪ್ರಸ್ತುತ ವರ್ಷ ಮಕ್ಕಾ ಮತ್ತು ಮದೀನಾದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಎರಡು ಹರಂಗಳ ನಾಲ್ಕೂ ಬದಿಗಳಲ್ಲಿ ಈ ಕೇಂದ್ರಗಳು ಇರಲಿದೆ. ಯಾತ್ರಿಕರ ಸಂಪೂರ್ಣ ಜವಾಬ್ದಾರಿ ಕಂಪೆನಿಗಳ ಮೇಲೆ ಇದ್ದು, ತಪ್ಪಿದಲ್ಲಿ ಸೇವಾ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಾಲಾಗುವುದು ಎಂದು ಸಚಿವಾಲಯ ತಿಳಿಸಿದೆ.