ಬೆಂಗಳೂರು,ಫೆ.27:- ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಜನತೆಗೆ ಹತ್ತಿರವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಗರದ ಜಯದೇವ ಆಸ್ಪತ್ರೆಯ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನೂತನ ಕಟ್ಟಡ ಶಂಕು ಸ್ಥಾಪನೆ ನರವೇರಿಸಿ ಮಾತನಾಡಿದರು. ಯಾವುದೇ ಖಾಸಗಿ ಆಸ್ಪತ್ರೆಗಳು ಜಯದೇವ ಆಸ್ಪತ್ರೆಗೆ ಸಮನಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕಳೆದ ಕೆಲ ತಿಂಗಳಿನಿಂದ ಜಯದೇವ ಸಂಸ್ಥೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು ಎಂದ ಅವರು, ರೋಗಿಗಳು ಬಂದಾಗ ಹಣಕ್ಕೆ ಆಸೆ ಪಡದೆ ಚಿಕಿತ್ಸೆಗೆ ಆದ್ಯತೆ ನೀಡುವ ಸಂಸ್ಥೆ ಜಯದೇವ ಎಂದ ಅವರು, ರಾಜ್ಯಕ್ಕೆ ಹೆಸರು ತಂದಿರುವ ಪ್ರತಿಷ್ಠಿತ ಸಂಸ್ಥೆ ಇದು ಎಂದರು.
ಇನ್ಫೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಅವರು ಆಸ್ಪತ್ರೆಗೆ ಹೆಚ್ಚಿನ ಹಾಸಿಗೆ ಇರುವ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಕೇವಲ ಒಂದೇ ವಾರದಲ್ಲಿ ನೀಲನಕ್ಷೆ ತಯಾರಿಸಿ ನೆರವಿಗೆ ಧಾವಿಸಿದ್ದಾರೆಂದು ತಿಳಿಸಿದರು.