ಇದೇ ಕರಾವಳಿಯಲ್ಲಿ ವರುಷಗಳ ಹಿಂದೆ ಸಮಾರೋಪಗೊಂಡ ‘ಕರ್ನಾಟಕ ಯಾತ್ರೆ’ ಯಾರಿಗೂ ಮರೆಯಲಾಗದು. ಹೌದು, ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧೀನದಲ್ಲಿ ‘ಸುಲ್ತಾನುಲ್ ಉಲಮಾ’ ಎ.ಪಿ.ಉಸ್ತಾದರ ಸಾರಥ್ಯದಲ್ಲಿ ಗುಂಬಝ್ ನಗರ ಗುಲ್ಬರ್ಗದಿಂದ ಹಾದು ಬಂದು ಮಂಗಳೂರಿನ ಹೃದಯ ಭಾಗ ನೆಹರು ಮೈದಾನ ದಲ್ಲಿ ನೆರೆದ ಶ್ವೇತ ಸಾಗರ ಇಂದಿಗೂ ಕಣ್ಣಿಂದ ಮಾಯುವಂತದಲ್ಲ.
ಅಂದಿನ ಆ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ ಹಾಗೂ ಕಾರ್ಯಕರ್ತರ ನಿಷ್ಠೆ ನೋಡಿ ವೇದಿಕೆಯಲ್ಲಿ ಆಸಿನರಾಗಿದ್ದ ಅನ್ಯ ಧರ್ಮದ ನಾಯಕರು ಕೂಡ ಬೆರಗಾಗಿದ್ದರು!! ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಹಿಂದು ಧರ್ಮದ ನಾಯಕ ಸ್ವಾಮಿಜಿ ಹಾಗೂ ಕ್ರೈಸ್ತ ಧರ್ಮದ ಭೋದಕರ ಭಾಷಣ ದಲ್ಲಿ ಕೇಳಲು ಸಾಧ್ಯವಾಗಿದ್ದು ‘ನಿಮ್ಮ ನಾಯಕ, ಎ.ಪಿ.ಉಸ್ತಾದರು ಇಂತಹ ಯಾತ್ರೆ ಕರ್ನಾಟಕ ದಲ್ಲಿ ಮಾತ್ರವಲ್ಲ ಭಾರತದ ಶಿರ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ನಡೆಸಬೇಕಿದೆ.
ಇಸ್ಲಾಂ ಧರ್ಮದ ಬಗ್ಗೆ ತಪ್ಪಾಗಿ ತಿಳಿದವರೆಗೆ ಇಂತಹ ಯಾತ್ರೆಗಳು ಉತ್ತರವಾಗಿರಲಿ. ನಿಮ್ಮ ಶಿಸ್ತು-ಆಸಕ್ತಿ ಭಾರತ ದೇಶದ ಅಭಿವೃದ್ದಿ ಕಡೆ ಹೆಜ್ಜೆ ಇರಲಿ.’ ಎಂದಾಗಿತ್ತು.
ಅದೇ ರೀತಿ ಇಂದು ‘ಸುಲ್ತಾನುಲ್ ಉಲಮಾ’ ರ ನಿರ್ಧೇಶನದಲ್ಲಿ ‘ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ವತಿಯಿಂದ’ ‘ಹಿಂದ್-ಸಫರ್, ಭಾರತ ಯಾತ್ರೆ’ ನಡೆಯುತ್ತಿದೆ. ಭಾರತದ ತಲೆ, ‘ಸೇಬುನಾಡು’ ಕಾಶ್ಮೀರದಿಂದ ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರ ನೇತ್ರತ್ವದಲ್ಲಿ ಸಾವಿರಾರು ಕಿ.ಮೀ ದಾಟಿ ನಾಳೆ(05-02-2019) ಕರಾವಳಿ ಕಡೆ ಹೆಜ್ಜೆ ಇಡುತ್ತಿದೆ. ಈ ಯಾತ್ರೆ ನಮ್ಮೂರಿಗೆ ಬರುತ್ತಿದೆ ಎಂದರೆ ಇದಕ್ಕಿಂತ ಸಂತೋಷ ಬೇರೆ ಏನಿದೆ! ಈ ಶುಭ ಕಾರ್ಯಕ್ರಮವೂ ಕರಾವಳಿಯ ಪುತ್ತೂರಿನ ‘ಕಿಲ್ಲೆ ಮೈದಾನದಲ್ಲಿ’ ಮತ್ತೊಮ್ಮೆ ಸುನ್ನೀ ಮನಸ್ಸುಗಳಲ್ಲಿ ಇತಿಹಾಸವನ್ನು ಬರೆಯಲಿದೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರಾದ ‘ಮೌಲಾನ|ಶೌಕತ್ ನಹೀಮಿ ಉಸ್ತಾದ್, ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಹಾಗೂ ಎಸ್ಸೆಸ್ಸೆಫ್ ಕೇರಳ ರಾಜ್ಯದ ಮಾಜಿ ಅಧ್ಯಕ್ಷ ಶೈಖುನಾ ಫಾರೂಕ್ ನಹೀಮಿ ಉಸ್ತಾದರು ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ-ಜಿಲ್ಲೆ ನಾಯಕರು ಆಗಮಿಸುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಸುನ್ನೀ ಕಾರ್ಯಕರ್ತರು ಪಾಲ್ಗೊಂಡು ‘ಹಿಂದ್-ಸಫರ್’ ಯಶಸ್ವಿಗೊಳಿಸಿ, ವಿಜಯಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಪುತ್ತೂರಿನ ದರ್ಬೆ ಸರ್ಕಲ್ ನಿಂದ ಕಿಲ್ಲೆ ಮೈದಾನದವರೆಗೂ ಶ್ವೇತವಸ್ತ್ರಧಾರಿಗಳ ಬೃಹತ್ ಜಾಥ ನಡೆಯಲಿದೆ.
ತಾವೂ ಬನ್ನೀ ತಮ್ಮವರನ್ನು ಕರೆತನ್ನಿ ಕಾರ್ಯಕ್ರಮದ ವಿಜಯದ ಪಾಲುದಾರಾಗಿರಿ. ಇಂಷಾ ಅಲ್ಲಾಹ್..
ನಿಝಾಂ_ಮಂಚಿ