ಜಿದ್ದಾ: ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಉಮ್ರಾ ಯಾತ್ರಾರ್ಥಿಗಳು ತಲುಪುವ ಮಕ್ಕಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲಿದೆ ಎಂದು ಅಭಿವೃದ್ದಿ ಪ್ರಾಧಿಕಾರವು ತಿಳಿಸಿದೆ. ಇದರ ಅಂಗವಾಗಿ, 400 ಬಸ್‌ಗಳನ್ನು ಆಧುನಿಕ ಸೌಕರ್ಯಗಳೊಂದಿಗೆ ರಸ್ತೆಗೆ ಇಳಿಸಲಾಗುವುದು ಎಂದು ಅಥಾರಿಟಿ ವ್ಯಕ್ತಪಡಿಸಿದೆ.
40 ಸೀಟುಗಳ 240 ಸಾಮಾನ್ಯ ಬಸ್‌ಗಳು ಮತ್ತು ಆರು ಸೀಟುಗಳುಳ್ಳ 160 ಡಬಲ್ ಡೆಕ್ಕರ್ ಬಸ್ಗಳು ಮಕ್ಕಾದಲ್ಲಿ ಸಂಚಾರ ನಡೆಸಲಿವೆ. ಈ ವರ್ಷ ಅಂತ್ಯದ ವೇಳೆಗೆ ವಿದೇಶಿ ನಿರ್ಮಿತ ಬಸ್ಸುಗಳು ಮಕ್ಕಾ ತಲುಪಲಿದೆ ಎಂದು ಅಭಿವೃದ್ಧಿ ಪ್ರಾಧಿಕಾರದ ವಕ್ತಾರ ಇಂಜಿನಿಯರ್ ಜಮಾಲ್ ಕಅ್‌ಕಿ ತಿಳಿಸಿದ್ದಾರೆ.
ಪ್ರವಾಸಿಗರಿಗೆ ಪರಿಸರ ಸ್ನೇಹಿ ಬಸ್ ಗಳಲ್ಲಿ ವೈಫೈ, ಇಂಟರ್ನೆಟ್ ಸೇವೆಗಳನ್ನು ಒದಗಿಸಲಾಗುತ್ತದೆ. ಅಂಗವೈಕಲ್ಯ ಇರುವವರಿಗೆ ವಿಶೇಷ ಆಸನ, ಕೂಲಿಂಗ್ ವ್ಯವಸ್ಥೆ, ಕ್ಯಾಮೆರಾ ಮತ್ತು ಡಿಜಿಟಲ್ ಪರದೆಯನ್ನು ಹೊಂದಿವೆ.
ಸೌದಿ ಅರೇಬಿಯಾದಲ್ಲಿನ ನೆಸ್ಮಾ ಕಂಪನಿಗೆ ಬಸ್ ತಯಾರಿಕೆ ಮತ್ತು ಆಮದಿನ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಬಗ್ಗೆ ಸ್ಪ್ಯಾನಿಷ್ ಕಂಪನಿ ಟಿಎನ್‌ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 3.2 ಶತಕೋಟಿ ರಿಯಾಲ್ ನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹೊಸ ಬಸ್ ಸೇವೆಯನ್ನು ಹರಮ್ ಮಸೀದಿಗೆ ಪ್ರಯಾಣಿಸಲು ವಿಶೇಷ ಟ್ರ್ಯಾಕ್‌ಗಳ ಮೂಲಕ ಪ್ರಾರಂಭಿಸಲಾಗುವುದು. ಇದು ಹಜ್ ಮತ್ತು ಉಮ್ರಾ ಋತುಗಳಲ್ಲಿ ಯಾತ್ರಿಕರಿಗೆ ಉತ್ತಮ ಪ್ರಯಾಣಾನುಭವವಾಗಲಿದೆ. ಇದು ಟ್ರಾಫಿಕ್ ಜಾಮ್ ನಲ್ಲಿ ಸಮಯ ಕಳೆದುಕೊಳ್ಳದೆ ವಾಸ ಸ್ಥಳಗಳಿಂದ ಪವಿತ್ರ ಮಸೀದಿಗೆ ತಲುಪಲು ಯಾತ್ರಾರ್ಥಿಗಳಿಗೆ ಸಾರಿಗೆ ಸುಗಮವಾಗಲಿದೆ ಎಂದು ಅಥಾರಿಟಿ ತಿಳಿಸಿದೆ.