ರಿಯಾದ್: ಪವಿತ್ರ ನಗರವಾದ ಮಕ್ಕಾ ತಲುಪುವವರು ಅಲ್ಲಿಂದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಪ್ರತ್ಯೇಕ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಯಾತ್ರಾ ದೀರ್ಘ ವನ್ನು ಕಡಿಮೆಗೊಳಿಸಿ, ರಸ್ತೆ ಸಂಚಾರವನ್ನು ಸುಗಮಗೊಳಿಸುವುದು ಈ ನಿರ್ಮಾಣದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮಕ್ಕಾ ಮತ್ತು ಮದೀನಾದ ಸುತ್ತ ಹಲವಾರು ಐತಿಹಾಸಿಕ ತಾಣಗಳಿದ್ದು, ಅವುಗಳನ್ನು ಪರಸ್ಪರ ಸಂಧಿಸುವುದು ಉದ್ದೇಶವಾಗಿದೆ. ಮಿಷನ್ 2030 ಯೋಜನೆ ಪ್ರಕಾರ ಹೆಚ್ಚಿನ ಉಮ್ರಾ ಯಾತ್ರಿಕರನ್ನು ವಹಿಸಲು ಸಾಧ್ಯವಾಗುವಂತಹ ಅಭಿವೃದ್ದಿಯನ್ನು ಮಸ್ಜಿದುಲ್ ಹರಂ ಮತ್ತಿತರ ಪ್ರದೇಶಗಳಲ್ಲಿ ನೆಸಲಾಗುತ್ತಿದೆ. ಸೌದಿ ಟೂರಿಸಂ ಅಥಾರಿಟಿಯ ಮೇಲ್ನೋಟದಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಬೆರಳೆಣಿಕೆಯ ದಿನಗಳು ಮಾತ್ರ ಪುಣ್ಯಭೂಮಿಯಲ್ಲಿ ತಂಗುವ ಯಾತ್ರಿಕರಿಗೆ ಈ ಮಾರ್ಗದಲ್ಲಿ ಅತಿವೇಗ ಪ್ರಯಾಣ ಬೆಳಸಿ ಸಂದರ್ಶನ ನಡೆಸಬಹುದಾಗಿದೆ.
ಉಮ್ಮುಲ್ ಖುರಾ ರಸ್ತೆಯಿಂದ ಪ್ರಾರಂಭಿಸಿ, ಮಸ್ಜಿದುನ್ನಮಿರ, ಐನ್ ಝುವೈದ, ಮಶ್ಹರ್ ಅಲ್ಹರಾಂ ಮಸೀದಿ, ಖೈಫ್ ಮಸೀದಿ, ಜಂರಾತ್, ಬೈಆ ಮಸೀದಿ ಮುಂತಾದ ಐತಿಹಾಸಿಕ ಸ್ಮಾರಕಗಳನ್ಬು ಬಂಧಿಸುವ ರಸ್ತೆ ಇದಾಗಿದೆ ಎಂದು ಅಧಿಕಾರಿಗಳು ಸ್ಪಸ್ಟಪಡಿಸಿದ್ದಾರೆ.