janadhvani

Kannada Online News Paper

ನಾಲ್ಕು ವಿದೇಶೀ ಕಾರ್ಮಿಕರಿರುವ ಸಣ್ಣ ಕಂಪೆನಿಗಳಿಗೆ ಲೆವಿ ಅನ್ವಯಿಸುವುದಿಲ್ಲ-ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ನಾಲ್ಕು ಮಂದಿ ವಿದೇಶೀ ಕಾರ್ಮಿಕರಿರುವ ಸಣ್ಣ ಕಂಪೆನಿಗಳಿಗೆ ಲೆವಿ ಅನ್ವಯಿಸುವುದಿಲ್ಲ. ಕೃಷಿ, ಮೀನುಗಾರಿಕೆ ಮತ್ತು ಜಾನುವಾರು ಸಾಕಾಣಿಕೆ ಮುಂತಾದ ವಲಯದ ಕೆಲಸಗಾರರನ್ನು ದೇಶೀಯ ಕಾರ್ಮಿಕ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಆದ್ದರಿಂದ ಅವರಿಗೆ ಕೆಲಸದ ಪರವಾನಿಗೆ ಅಗತ್ಯವಿಲ್ಲ ಎಂದು ಸೌದಿ ಕಾರ್ಮಿಕ ಸಚಿವಾಲಯ ಹೇಳಿದೆ.

ಪ್ರಾಯೋಜಕರಿಂದ ತಪ್ಪಿಸಿಕೊಂಡ ಮನೆ ಚಾಲಕರ ಬದಲಿಗೆ ಉದ್ಯೋಗಿಗಳನ್ನು ನೇಮಕ ಮಾಡಲು ಅನುಮತಿ ನೀಡಲಾಗುವುದಿಲ್ಲ. ಗೃಹ ಕಾರ್ಮಿಕರ ನೇಮಕಾತಿಗಾಗಿ ಬ್ಯಾಂಕ್ ಠೇವಣಿಗಳನ್ನು ರೂ 3.5 ಲಕ್ಷವಾಗಿ ಕಡಿತಗೊಳಿಸಲಾಗಿದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಕೆಲಸದಲ್ಲಿ ಕಾರ್ಯಕ್ಷಮತೆ ಇಲ್ಲದ ಮನೆ ಕೆಲಸದಾಕೆ ಯನ್ನು ಮೂರು ತಿಂಗಳೊಳಗೆ ನೇಮಕಾತಿ ಕಛೇರಿಗಳಿಗೆ ಮರಳಿಸಬೇಕು. ನೇಮಕಾತಿ ಕಂಪನಿಗಳಿಂದ ಹೊಸ ವ್ಯಕ್ತಿಯನ್ನು ಆಯ್ಕೆಮಾಡಲು ಉದ್ಯೋಗದಾತರಿಗೆ ಅನುಮತಿ ನೀಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ವ್ಯಕ್ತಿಗಳಿಗೆ ಮೂರು ವಿಭಾಗಗಳ ಮನೆ ಕೆಲಸಗಾರರನ್ನು ನೇಮಕಗೊಳಿಸಲು ವೀಸಾ ಅನುಮತಿಸಲಾಗುತ್ತದೆ. ವೀಸಾ ಅನುಮತಿಗಾಗಿ ಠೇವಣಿ ಇರಿಸಬೇಕಾದ ಬ್ಯಾಂಕ್ ಬ್ಯಾಲೆನ್ಸ್ ಅನ್ನು 5 ಲಕ್ಷದಿಂದ ಮೂರುವರೆ ಲಕ್ಷವಾಗಿ ಕಡಿತಗೊಳಿಸಲಾಗಿದೆ. ವೀಸಾಕ್ಕೆ ಅರ್ಜಿ ಸಲ್ಲಿಸುವವರು ಉದ್ಯೋಗ ಪ್ರಮಾಣಪತ್ರವನ್ನು ಹಾಜರುಪಡಿಸಿದರೆ ಸಾಕಾಗುತ್ತವೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

error: Content is protected !! Not allowed copy content from janadhvani.com