ದುಬೈ: ಹೊಸ ಕೆಲಸವನ್ನು ಹುಡುಕುವವರ ಸೌಕರ್ಯಕ್ಕಾಗಿ ಆರು ತಿಂಗಳ ಕಾಲಾವಧಿಯ ವೃತ್ತಿ ಅನ್ವೇಷಣಾ ವಿಸಾ ಈಗ ಚಲಾವಣೆಯಲ್ಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಕೊನೆಗೊಂಡ ಸಾಮೂಹಿಕ ಕ್ಷಮಾದಾನ ಸಮಯದಲ್ಲಿ ಮಾತ್ರ ಈ ಅವಕಾಶವನ್ನು ನೀಡಲಾಗಿತ್ತು, ಆದರೆ, ಡಿಸೆಂಬರ್ 31ಕ್ಕೆ ಆ ವೀಸಾ ವ್ಯವಸ್ಥೆಯನ್ನು ರದ್ದು ಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕಾನೂನು ಬಾಹಿರವಾಗಿ ದೇಶದಲ್ಲಿ ಉಳಿದುಕೊಂಡಿದ್ದ ಜನರು ತಮ್ಮ ವಾಸವನ್ನು ಕಾನೂನಾತ್ಮಕವಾಗಿ ಖಚಿತ ಪಡಿಸಲು ಮತ್ತು ಹೊಸ ಸ್ಪೋನ್ಸರ್, ಕೆಲಸ ಹುಡುಕಲು ದೇಶದಲ್ಲಿ ಆರು ತಿಂಗಳ ವಿಸಾವನ್ನು ಚಲಾವಣೆಗೆ ತರಲಾಗಿತ್ತು ಎಂದು General Directorate of Residency and Foreigners Affairs ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಫೋನ್ ಮೂಲಕ ಮತ್ತು ಮುಖತ ದಿನನಿತ್ಯ ನೂರಾರು ಮಂದಿ ಎಮಿಗ್ರೇಷನ್ ಮತ್ತು ಅಮೀರ್ ಕೇಂದ್ರಗಳಲ್ಲಿ ವಿಚಾರಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ.