janadhvani

Kannada Online News Paper

ಸೌದಿ :8ಸಾವಿರ ರಿಯಾಲ್ ನಲ್ಲಿ 2 ವರ್ಷ ಇಖಾಮ-ನಿಜಾಂಶವೇನು?

ರಿಯಾದ್: ಸೌದಿ ಅರೇಬಿಯಾದಲ್ಲಿ  8000 ರಿಯಾಲ್ ನೀಡಿದ್ದಲ್ಲಿ ಎರಡು ವರ್ಷಗಳಿಗೆ ಲೆವಿ ಸಮೇತ ಇಖಾಮಾ ನವೀಕರಣ ಮಾಡಲಾಗುತ್ತದೆ ಎನ್ನುವ ಬಗ್ಗೆ ವಾಟ್ಸ್ಆ್ಯಪ್ ಮೂಲಕ ಹರಡಲಾದ ವರದಿಯನ್ನು ಕಾರ್ಮಿಕ , ಸಮಾಜಿಕ ಸಚಿವಾಲಯ ನಿರಾಕರಿಸಿದೆ. ಇಂತಹ ತೀರ್ಮಾನಗಳು ಮತ್ತು ಮಾಹಿತಿಗಳನ್ನು ಸಚಿವಾಲಯ ನೇರವಾಗಿ ತಿಳಿಸಲಿದ್ದು, ಇಂತಹ ಅಪಪ್ರಚಾರಗಳನ್ನು ನಂಬದಿರುವಂತೆ ಸಚಿವಾಲಯವು ಪತ್ರಿಕೆಯೊಂದಕ್ಕೆ ತಿಳಿಸಿದೆ.

8000 ರಿಯಾಲ್ ನೀಡಿ ಎರಡು ವರ್ಷಗಳ ವರೆಗಿನ ಇಖಾಮಾ ನವೀಕರಣ ಮಾಡಿರುವುದಾಗಿ ತಿಳಿಸಿದ ವಾಟ್ಸ್ ಆಪ್ ಮೆಸೇಜೊಂದು ವಾರ್ಷಿಕ ಇಖಾಮಾ ನವೀಕರಣ ದರವನ್ನು 4000ಕ್ಕೆ ನಿಗದಿ ಪಡಿಸಲಾಗಿದೆ ಎಂದಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಚಿವಾಲಯವನ್ನು ಸಂಪರ್ಕಿಸಿದಾಗ “ಈ ವರಗೆ ಅಂತಹ ಯಾವುದೇ ತೀರ್ಮಾನಕೈಗೊಳ್ಳಲಾಗಿಲ್ಲ. ಅಂತಹ ವಿಚಾರಗಳನ್ನು ನೇರವಾಗಿ ತಿಳಿಸಲಾಗುವುದು” ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

ಜ.1ರಿಂದ ಸ್ವದೇಶಿಗಳಿಗಿಂತ ಹೆಚ್ಚು ವಿದೇಶೀಯರಿರುವ ಕಂಪನಿಯು ಪ್ರತೀ ತಿಂಗಳು ತಲಾ 600 ರಿಯಾಲ್ ಮತ್ತು ಸ್ವದೇಶಿಗಳಿಗಿಂತ ಕಡಿಮೆ ವಿದೇಶೀಯರಿರುವ ಕಂಪನಿಯು ತಲಾ 500 ರಿಯಾಲ್ ಲೆವಿ ಪಾವತಿಸಬೇಕಾಗಿದೆ. 2020 ರ ಜನವರಿಯಿಂದ 100 ರಿಯಾಲ್ ಹೆಚ್ಚಳವಾಗಲಿದೆ.

2017ರ ಬಜೆಟ್‌ನಲ್ಲಿ ಈ ಬಗ್ಗೆ ಕಾನೂನು ಹೊರಡಿಸಲಾಗಿದ್ದು, ಆ ಪ್ರಕಾರ ಕಾನೂನು ಜಾರಿಯಲ್ಲಿದೆ. ಹೊಸದಾಗಿ ವಾಟ್ಸ್ ಆಪ್ ನಲ್ಲಿ ಹರಡಲಾದ ಮಾಹಿತಿಯಲ್ಲಿ ಯಾವುದೇ ಹುರುಳಿಲ್ಲ ಎಂದು ವಿವಿಧ ಕಂಪೆನಿಗಳ ಎಚ್.ಆರ್. ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com