janadhvani

Kannada Online News Paper

ಬಹ್ರೈನ್: ಟ್ರಾನ್ಸಿಟ್ ಯಾತ್ರಿಕರಿಗೆ 4 ದಿನ ತಂಗುವ ಅವಕಾಶ

ಮನಾಮ: ಬಹರೈನ್ನಲ್ಲಿ ‘ವಿಸ ಆನ್‌ ಅರೈವಲ್’ ಸೌಲಭ್ಯವಿರುವ ದೇಶಗಳಲ್ಲಿನ ಟ್ರಾನ್ಸಿಟ್ ಯಾತ್ರಿಕರಿಗೆ ಬಹ್ರೈನ್‌ನಲ್ಲಿ ನಾಲ್ಕು ದಿನಗಳ ವರೆಗೆ ತಂಗುವ ವಿಧಾನವನ್ನು ಸಜ್ಜುಗೊಳಿಸಲಾಗಿದೆ.

ಗಲ್ಫ್ ಏರ್‌ನ ಟಿಕೆಟ್ ಕೈಯ್ಯಲ್ಲಿದ್ದರೆ 4 ದಿನ ಬಹ್ರೈನ್ ನಲ್ಲಿ ತಂಗುವ ವಿಸಾದ ಮೊತ್ತವನ್ನು ಬಹ್ರೈನ್ ಟೂರಿಸಂ ಆ್ಯಂಡ್ ಎಕ್ಸಿಬಿಷನ್ ಅಥಾರಿಟಿಯು ವಹಿಸಲಿದೆ. ಈ ಯೋಜನೆಯು ಕಳೆದ ತಿಂಗಳಿನಲ್ಲಿ ಪ್ರಾರಂಭಗೊಂಡಿದ್ದು, ಅದು ಟ್ರಾನ್ಸಿಟ್ ಯಾತ್ರಿಕರನ್ನು ಹೆಚ್ಚಿಸಲಿದೆ ಎಂದು ಪ್ರವಾಸೋದ್ಯಮ ಮಾರ್ಕೆಟಿಂಗ್ ಮತ್ತು ಪಬ್ಲಿಶಿಂಗ್ ನಿರ್ದೇಶಕ ಯೂಸಫ್ ಅಲ್ ಖಾನ್ ಸ್ಥಳೀಯ ಪತ್ರಿಕೆಗೆ ತಿಳಿಸಿದರು.’ಗಲ್ಫ್ ಏರ್‌ನ ಸಹಯೋಗದೊಂದಿಗೆ ಈ ‘ಸ್ಟಾಪ್ ಓವರ್’ ಯೋಜನೆ ಜಾರಿಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

60 ದೇಶಗಳ ನಾಗರಿಕರಿಗೆ ಮನಾಮ ನಿಲ್ದಾನದಿಂದ ಆನ್ ಅರೈವಲ್ ವಿಸಾ ಲಭಿಸಲಿದೆ.
ಮಾತ್ರವಲ್ಲದೆ 113 ರಾಷ್ಟ್ರಗಳ ನಾಗರಿಕರು ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದು.ಕೆಲವು ಪ್ರಯಾಣಿಕರು ಈಗಾಗಲೇ ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
ಬಹ್ರೈನ್‌ನ ರಾಷ್ಟ್ರೀಯ ವಾಹಕವಾದ ಗಲ್ಫ್ ಏರ್ ದೊಡ್ಡ ಪ್ರಗತಿ ಸಾಧಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿ ಸ್ಥಳಗಳಿಗೆ ಸೇವೆಗಳನ್ನೂ ಸಜ್ಜುಗೊಳಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ “ಸ್ಟಾಪ್ ಓವರ್ ಪ್ರವಾಸೋಧ್ಯಮ ಯೋಜನೆ”ಗೆ ಭಾರೀ ಪ್ರಚಾರವನ್ನು ನೀಡಲು ಆಲೋಚಿಸಲಾಗಿದೆ.

ಬಹ್ರೈನ್‌ಗರ ಹೆಚ್ಚು ಪ್ರವಾಸಿಗರನ್ನು ಕರೆತರುವಲ್ಲಿ ಬಿಟಿ ಇಎಯು ವರ್ಷವಿಡೀ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಯೋಜಿಸುತ್ತಿದೆ.ವಿವಿಧ ರಾಷ್ಟ್ರಗಳಿಂದ ಪ್ರವಾಸಿಗರನ್ನೊಳಗೊಂಡ ಚಾರ್ಟರ್ ಪ್ಲೈಟ್‌ಗಳನ್ನು ತರಲು ಬಿಟಿಎಇ ಪ್ರಯತ್ನಿಸುತ್ತಿದೆ.ಕಳೆದ ವರ್ಷ 12 ಮಿಲಿಯನ್ ಪ್ರವಾಸಿಗರು ಬಹ್ರೈನ್‌ಗೆ ಆಗಮಿಸಿದ್ದರು, ಇದು 2017 ರಲ್ಲಿ 9.7 ಮಿಲಿಯನ್ ಆಗಿದ್ದು, ಅದಕ್ಕೆ ಹೋಲಿಸಿದರೆ ಭಾರಿ ಏರಿಕೆಯಾಗಿದೆ.2022 ರ ವೇಳೆಗೆ 14.6 ದಶಲಕ್ಷ ಪ್ರವಾಸಿಗರ ಆಗಮನವನ್ನು ಬಿಟಿಎಇ ಗುರಿ ಹೊಂದಿದೆ.

ಬಹ್ರೈನ್‌ಗೆ ಈಗ ಬರುವ ಬಹುತೇಕ ಪ್ರವಾಸಿಗರಲ್ಲಿ ಹೆಚ್ಚಿನವರು ಸೌದಿ ಅರೇಬಿಯಾ ಸೇರಿದಂತೆ ಜಿ.ಸಿ.ಸಿ ದೇಶಗಳಿಂದ ಬರುವ ಯಾತ್ರಿಕರಾಗಿದ್ದಾರೆ. ಬಿಟಿಎಇ ಪ್ರಕಾರ, ಒಬ್ಬ ಪ್ರವಾಸಿ ಬಹ್ರೈನ್‌ನಲ್ಲಿ ದಿನಕ್ಕೆ 80 ದಿನಾರ್‌ಗಳನ್ನು ಖರ್ಚು ಮಾಡುತ್ತಾರೆ. ಇದು ಕಳೆದ ವರ್ಷಗಳಲ್ಲಿ ಮಾಡಿದ ಖರ್ಚಿಗಿಂತ ಅಧಿಕವಾಗಿದೆ.
2022 ರ ಒಳಗೆ ಈ ಮೊತ್ತವನ್ನು 97.9 ಗೆ ತಲುಪಿಸುವುದು ‘ಬಿಟಿಎಇ’ ಯ ಮುಂದಿನ ಗಿರಿಯಾಗಿದೆ.

error: Content is protected !! Not allowed copy content from janadhvani.com