ಕುವೈಟ್: ಪ್ರವಾದಿ ಮುಹಮ್ಮದ್ (ಸ.ಅ) ರವರನ್ನು ಟಿವಿ ನಿರೂಪಕರೋರ್ವರು ಅನಗತ್ಯವಾಗಿ ಚರ್ಚೆಯೊಂದರಲ್ಲಿ ಎಳೆದು ತಂದು ನಿಂದನೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಸಖಾಫಿ ಹೇಳಿದ್ದಾರೆ.
ಸಾಹಿತಿ ಪ್ರೊ ಭಗವಾನ್ ರವರು ರಾಮಾಯಣಕ್ಕೆ ಸಂಬಂಧಿಸಿ ಬರೆದ ಕೃತಿಯಲ್ಲಿ ಸಮುದಾಯದ ಭಾವನೆಗೆ ದಕ್ಕೆ ತರುವಂತಹ ವಿಚಾರಗಳಿದ್ದರೆ ಅದು ಖಂಡನೀಯ.ಆದರೆ ಈ ಕುರಿತು ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರವರ ಹೆಸರನ್ನು ಎಳೆದು ತಂದು ಅನಗತ್ಯವಾಗಿ ಧರ್ಮ ಧರ್ಮ ಗಳ ನಡುವೆ ಕೋಮು ಭಾವನೆಗಳನ್ನು ಸೃಷ್ಟಿಸುವ ಹುನ್ನಾರದಿಂದ ಇಂತಹ ನಿಂದನಾತ್ಮಕ ಚರ್ಚೆಯನ್ನು ನಡೆಸಲಾಗುತ್ತಿದೆ.ಇಂತಹ ಮಾಧ್ಯಮದವರನ್ನು ಸಮಾಜವು ಬಹಿಷ್ಕರಿಸಬೇಕಾಗಿದೆ ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.