ಮಂಗಳೂರು: ಸುನ್ನೀ ಮದ್ರಸ ಅಧ್ಯಾಪಕರ ಒಕ್ಕೂಟವಾದ ಎಸ್ ಜೆ ಯಂ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿರುವ ಮುಅಲ್ಲಿಮ್ ಎಂಪವರ್ ಮೆಂಟ್ ತರಬೇತಿಯ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದೇರಳಕಟ್ಟೆ ರೇಂಜ್ ಗೆ ಒಳಪಟ್ಟ ಉರುಮಣೆ ಹಿದಾಯತುಲ್ ಇಸ್ಲಾಮ್ ಮದ್ರಸ ದಲ್ಲಿ ಜರುಗಿತು.
ಮದ್ರಸ ಅಧ್ಯಾಪಕರ ಸಮಗ್ರ ಸಬಲೀಕರಣಕ್ಕಾಗಿ ನೂರು ಗಂಟೆ ಅವಧಿಯ ವಿಶಿಷ್ಟ ತರಬೇತಿ ಶಿಬಿರವು ಪ್ರತಿ ರೇಂಜ್ ಮಟ್ಟದಲ್ಲೂ ನಡೆಯಲಿದೆ.
ಮದ್ರಸ ಎದುರಿಸುತ್ತಿರುವ ಸವಾಲುಗಳು, ಕ್ಲಾಸ್ ರೂಂ ಮ್ಯಾನೇಜ್ ಮೆಂಟ್, ಕೌನ್ಸಿಲಿಂಗ್, ಎಜುಕೇಶನಲ್ ಸೈಕೋಲಜಿ, ಸ್ಪೋಕನ್ ಇಂಗ್ಲಿಷ್, ಅಕಾಡೆಮಿಕ್, ಲೀಡರ್ ಶಿಪ್, ಮುಂತಾದ ಹದಿನಾರು ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಾಗುವುದು.
ಇದರ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಎಸ್ ಜೆ ಯಂ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಕುಂಞಕುಳಂ ರಾಜ್ಯ ಸಮಿತಿ ಅಧ್ಯಕ್ಷರಾದ ತಪಾಸಣಾಧಿಕಾರಿ ಆತೂರ್ ಸಅದ್ ಮುಸ್ಲಿಯಾರ್ ಚೆರೂಪ ಬಶೀರ್ ಮುಸ್ಲಿಯಾರ್ ಬಶೀರ್ ಮಿಸ್ಬಾಹಿ ಮುಂಡಂಬ್ರ ಮುಂತಾದವರು ತರಬೇತಿ ಮಂಡಿಸಿದರು.
ಎಸ್ ಜೆ ಯಂ ದೇರಳಕಟ್ಟೆ ರೇಂಜ್ ಅಧ್ಯಕ್ಷರಾದ ಇಸ್ಮಾಯಿಲ್ ಸಅದಿ ಸ್ವಾಗತಿಸಿ ವಂದಿಸಿದರು.