janadhvani

Kannada Online News Paper

ಪೆರ್ನೆಯಲ್ಲಿ ರಕ್ತದಾನ ಶಿಬಿರ ಹಾಗೂ ಮತ ಪ್ರಭಾಷಣ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಹಾಗೂ ಸುನ್ನೀ ಸಂಘಟನೆಗಳು ಪೆರ್ನೆ ಇದರ ವತಿಯಿಂದ ಯೇನಪೋಯ ಮೆಡಿಕಲ್ ಕಾಲೇಜು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮವು ಡಿಸೆಂಬರ್ 30 ಆದಿತ್ಯವಾರ ಪೆರ್ನೆ ಸುನ್ನೀ ಸೆಂಟರ್ ವಠಾರದ ಮರ್ಹೂಂ ಶರ್ಫುದ್ದೀನ್ ಬಾನೊಟ್ಟು ವೇದಿಕೆಯಲ್ಲಿ ನಡೆಯಲಿದೆ,

ಅಂದು ಬೆಳಿಗ್ಗೆ 9 ಗಂಟೆಗೆ ರಕ್ತದಾನ ಶಿಬಿರ ಆರಂಭವಾಗಲಿರುತ್ತದೆ ಸಂಜೆ 7 ಗಂಟೆಗೆ ಏಕದಿನ ಮತ ಪ್ರಭಾಷಣದಲ್ಲಿ ಮೌಲಾನಾ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿರುವರು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.