ಗುರುವಾಯನಕೆರೆ : ಸುನ್ನೀ ಸ್ಟೂಡೆಂಟ್ ಫೆಡೆರೇಶನ್ SSF ಗುರುವಾಯನಕೆರೆ ಸೆಕ್ಟರ್ ಇದರ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.23 ರಂದು ಸೆಕ್ಟರ್ ಅಧ್ಯಕ್ಷರಾದ ಕರೀಂ ಸಖಾಫಿ ರವರ ಅದ್ಯಕ್ಷತೆಯಲ್ಲಿ ಮನ್ಶರ್ ಕ್ಯಾಂಪಸ್, ಗೇರುಕಟ್ಟೆಯಲ್ಲಿ ನಡೆಯಿತು.
ಮಹಾಸಭೆಗೆ ವೀಕ್ಷಕರಾಗಿ ಡಿವಿಷನ್ ಅಧ್ಯಕ್ಷರಾದ ಬಹು|ಖಾಸಿಂ ಮುಸ್ಲಿಯಾರ್, ಸೆಕ್ಟರ್ ಉಸ್ತುವಾರಿ ಬಹು|ಹನೀಫ್ ಮುಸ್ಲಿಯಾರ್ ಉಳ್ತೂರು , ಅಶ್ರಫ್ ಉಜಿರೆ ಹಾಗೂ ತೌಫೀಖ್ ವೇಣೂರು ಇವರು ಆಗಮಿಸಿದ್ದರು.
ಸೆಕ್ಟರ್ ಅಧ್ಯಕ್ಷರಾದ ಕರೀಂ ಸಖಾಫಿ ಉಸ್ತಾದರು ದುಆ ನೆರವೇರಿಸಿ , ಸೆಕ್ಟರ್ ಉಸ್ತುವಾರಿ ಹನೀಫ್ ಮುಸ್ಲಿಯಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಡಿವಿಶನ್ ಅಧ್ಯಕ್ಷರಾದ ಖಾಸಿಂ ಮುಸ್ಲಿಯಾರ್ ರವರು ಕಾರ್ಯಕರ್ತರಿಗೆ ತರಗತಿ ನಡೆಸಿದರು.
ಕಾರ್ಯದರ್ಶಿ ಝೈನುದ್ದೀನ್ ರವರು ವರದಿ ಹಾಗೂ ಕೋಶಾಧಿಕಾರಿ ಇಸ್ಹಾಕ್ ಅಳದಂಗಡಿ ರವರು ಲೆಕ್ಕಪತ್ರ ಮಂಡನೆ ಮಾಡಿದರು.ವೀಕ್ಷಕರ ನೇತೃತ್ವದಲ್ಲಿ ಹಾಲಿ ಸಮಿತಿಯನ್ನು ಬರ್ಕಾಸ್ತುಗೊಳಿಸಿ, ನೂತನ ಸಮಿತಿಯನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬಹು|ಜಮಾಲುದ್ದೀನ್ ಮದನಿ,ಮದ್ದಡ್ಕ ಹಾಗೂ ಪ್ರ.ಕಾರ್ಯದರ್ಶಿಯಾಗಿ ಫಾರೂಖ್ ಜಿ.ಕೆರೆ, ಕೋಶಾಧಿಕಾರಿಯಾಗಿ ನಾಸಿರ್ ಸುನ್ನತ್ ಕರೆ ಹಾಗೂ ಕ್ಯಾಂಪಸ್ ಕಾರ್ಯದರ್ಶಿಯಾಗಿ ಝೈನುದ್ದೀನ್ ಇವರನ್ನು ಆಯ್ಕೆ ಮಾಡಲಾಯಿತು.
ಉಪಾದ್ಯಕ್ಷರಾಗಿ , ಬಹು|ಮುಸ್ತಫಾ ಹಿಮಮಿ ಪರಪ್ಪು ಮತ್ತು ಇಸ್ಹಾಕ್ ಅಳದಂಗಡಿ ರವರನ್ನು, ಹಾಗೂ ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಜಾರಿಗೆಬೈಲು ಮತ್ತು ಸುಫ್ಯಾನ್ ಲಾಡಿ ಇವರನ್ನು ಆಯ್ಕೆ ಮಾಡಲಾಯಿತು. ಬಳಿಕ ಕರೀಂ ಸಖಾಫಿ, ನಝೀರ್ ಅಹ್ಸನಿ ಬಟ್ಟೆಮಾರ್, ನವಾಝ್ ಮಾವಿನಕಟ್ಟೆ, ತ್ವಾಹಿರ್ ಫಾಳಿಲಿ, ಇಕ್ಬಾಲ್ ಮರ್ಝೂಖಿ ಸಖಾಫಿ ಪರಪ್ಪು, ಹಬೀಬ್ ಸಖಾಫಿ,
ಅನ್ಸಾರ್ ಜಿ.ಕೆರೆ, ಫಯಾಝ್ ಗೇರುಕಟ್ಟೆ, ಅರ್ಫಾಝ್ ಸುನ್ನತ್ ಕೆರೆ,ಇರ್ಷಾದ್ ಬದ್ಯಾರ್,ಇರ್ಫಾನ್ ಜಿ.ಕೆರೆ ಇವರುಗಳನ್ನು ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಿ, ಬಳಿಕ ನೂತನ ಸಮಿತಿಗೆ ಕಡತ ಹಸ್ತಾಂತರ ಮಾಡಲಾಯಿತು.
ಸೆಕ್ಟರ್ ಕಾರ್ಯದರ್ಶಿ ಝೈನುದ್ದೀನ್ ರವರು ಸ್ವಾಗತಿಸಿ, ನೂತನ ಕಾರ್ಯದರ್ಶಿ ಫಾರೂಕ್ ರವರು ಧನ್ಯವಾದ ಹೇಳಿದರು.
ವರದಿ:ಸಿದ್ದೀಕ್ ಜಾರಿಗೆಬೈಲು