ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್-ಎಸ್ಎಸ್ಎಫ್ ಕಲಾಸಿಪಾಳ್ಯ ಶಾಖೆ ಇದರ ವಾರ್ಷಿಕ ಮಹಾಸಭೆಯು ದಿನಾಂಕ 16-12-2018 ಬಾನುವಾರ ಕಲಾಸಿಪಾಳ್ಯ ಮಸ್ಜಿದುಲ್ ಖುರ್ಷಿದ್ ನಲ್ಲಿ ಶಾಖಾ ಅಧ್ಯಕ್ಷರಾದ ನವಾಸ್ ಅಸೈಗೋಳಿ ಅಧ್ಯಕ್ಷತೆಯಲ್ಲಿ ನಡೆಯಿತು.
SSF ಮೆಜೆಸ್ಟಿಕ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಮಾಲುದ್ದೀನ್ ಶರೀಫ್ ರವರು ಸಭೆಯನ್ನು ಉದ್ಘಾಟಿಸಿದರು ಶಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ನೌಶಾದ್ ಕಲ್ಲಾಪು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ SSF ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಶಾಫಿ ಸಅದಿ ಪೊಯ್ಯತ್ತಬೈಲ್ ಸಂಘಟಣಾ ತರಗತಿ ನಡೆಸಿದರು. ಬಳಿಕ SSF ಮೆಜೆಸ್ಟಿಕ್ ಡಿವಿಷನ್ ನಿಂದ ವೀಕ್ಷಕರಾಗಿ ಆಗಮಿಸಿದ SSF ಮೆಜೆಸ್ಟಿಕ್ ಡಿವಿಷನ್ ಉಪಾಧ್ಯಕ್ಷರಾದ ಹನೀಫ್ ಅಸೈಗೊಳಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ
ಪ್ರಧಾನ ಕಾರ್ಯದರ್ಶಿ : ನೌಶಾದ್ ಕಲ್ಲಾಪು
ಕೋಶಾಧಿಕಾರಿ : ಸ್ಯೆಯದ್ ಅಲಿ ಕಲಾಸಿಪಾಳ್ಯ
ಉಪಾಧ್ಯಯಕ್ಷರುಗಳು : ಶಾಪಿ ಅಸೈ ಹಾಗೂ ಅಬ್ದುಲ್ ಲತೀಫ್ ಅಸೈ
ಕಾರ್ಯದರ್ಶಿಗಳು : ರಿಯಾಝ್ ತೋಕೆ ಹಾಗೂ ಶಿಹಾಬ್ ಅಸೈ ಇವರನ್ನೊಳಗೊಂಡ 17 ಕಾರ್ಯಕಾರಿ ಸಮಿತಿ
ಸದಸ್ಯರನ್ನು ಆರಿಸಲಾಯಿತು ಮುಖ್ಯ ಅತಿಥಿಗಳಾಗಿ SჄS ನಾಯಕರಾದ ಸಂಸುದ್ದೀನ್ ಕಾಪಡ್ ಹನೀಫ್ ಉಸ್ತಾದ್ ಜಾಲಿ ಮೊಹಲ್ಲಾ ಮುಯಿನ್ ಬಾಯಿ ಮಾರ್ಕೆಟ್ ಭಾಗವಹಿಸಿದರು
ಪ್ರಾರಂಭದಲ್ಲಿ ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ ಸ್ವಾಗತಿಸಿ ನೂತನ ಕಾರ್ಯದರ್ಶಿ ರಿಯಾಝ್ ತೋಕೆ ಧನ್ಯವಾದ ಸಲ್ಲಿಸಿದರು