janadhvani

Kannada Online News Paper

ಡಿ.16ಕ್ಕೆ ಸುರಿಬೈಲ್ ನಲ್ಲಿ SჄS ದ.ಕ.ಜಿಲ್ಲಾ ಅಸೆಂಬ್ಲಿ

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SჄS)
ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಯು ಕಳೆದ ಮೂರು ತಿಂಗಳಿಂದ ಬ್ರಾಂಚ್, ಸೆಂಟರ್ ಮತ್ತು ಝೋನ್ ಗಳಲ್ಲಿ ಅಸೆಂಬ್ಲಿ ಕಾರ್ಯಕ್ರಮ ನಡೆದು ಇದೀಗ ಡಿಸೆಂಬರ್ 16 ಆದಿತ್ಯ ವಾರ ಅಪರಾಹ್ನ 2.00 ಘಂಟೆ ಗೆ ಬಂಟ್ವಾಳ ತಾಲೂಕಿನ ಸುರಿಬೈಲ್ ದಾರುಲ್ ಅಶ್ಹರಿಯ್ಯಾ ವಿಧ್ಯಾ ಕೇಂದ್ರ ದಲ್ಲಿ ಜಿಲ್ಲಾ ಅಸೆಂಬ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ 1000 ಜಿಲ್ಲೆಯ ವಿವಿಧ ಘಟಕಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ .

ಜಿಲ್ಲಾ ದ್ಯಕ್ಷ ಪಿ ಎಂ ಉಸ್ಮಾನ್ ಸಅಧಿ ಪಟ್ಟೋರಿ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರಾದ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸುವರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೌನ್ಸಿಲರ್ ಗಳು, ಝೋನ್ ಕಾರ್ಯಕಾರಿಣಿ ಸದಸ್ಯರು,31 ಸೆಂಟರ್ ಗಳ ಕಾರ್ಯಕಾರಿಣಿ ಸದಸ್ಯರು, 293 ಬ್ರಾಂಚ್ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಗಳು ಕಡ್ಡಾಯವಾಗಿ ಭಾಗವಹಿಸಲು ಈ ಮೂಲಕ ವು ಕೋರಲಾಗಿದೆ. ಎಂದು SჄS ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.