ಪುತ್ತೂರು: ಇದೇ ಬರುವ ಡಿಸೆಂಬರ್ 3 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಆದರ್ಶ ವಿವಾಹ, ಮೀಲಾದ್ ಜಾಥಾ,ದಾರುಲ್ ಅಮಾನ್ ವಸತಿ ಯೋಜನೆಗೆ ಚಾಲನೆ,
ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ , ಗಳನ್ನೊಳಗೊಂಡ ಕನಕ್ಟ್ 2018 ಸಾಮುದಾಯಿಕ ಸಮ್ಮಿಲನವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿಯ ಇಂದು ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಕರೆ ನೀಡಲಾಯಿತು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ ಕಾರ್ಯದರ್ಶಿ ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿಯವರು ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ಯಾಕೂಬ್ ಮಾಸ್ಟರ್ ಕೊಡಗು, ಹಮೀದ್ ಮುಸ್ಲಿಯಾರ್ ಶಿವಮೊಗ್ಗ,ಕೆ.ಎಂ ಮುಸ್ತಫ ನಯೀಮಿ ಹಾವೇರಿ, ಇಸ್ಮಾಯಿಲ್ ಝೈನಿ ಕೊಡಗು, ರವೂಫ್ ಖಾನ್ ಕುಂದಾಪುರ, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ,ಶಾಕಿರ್ ಹಾಜಿ ಮಿತ್ತೂರು, ನವಾಝ್ ಭಟ್ಕಳ, ತಾಜುದ್ದೀನ್ ಫಾಳಿಲಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿ ಯಾಕೂಬ್ ಮಾಸ್ಟರ್ ವಂದಿಸಿದರು.