janadhvani

Kannada Online News Paper

ತನ್ನ ಮಡದಿ ಮಕ್ಕಳು ಮತ್ತು ಕುಟುಂಬ ವರ್ತುಲಗಳ ಆರ್ಥಿಕ ಸಂಕಷ್ಟದ ಪರಿಹಾರಕ್ಕಾಗಿ ಕಾಣುತ್ತಿರುವ ಕನಸುಗಳಲ್ಲಿ ಪ್ರಮುಖವಾದದ್ದು.. ವಿದೇಶಗಳಲ್ಲಿ ದುಡಿದರೆ ಒಂದಿಷ್ಟು ಉನ್ನತಿಗೇರಬಹುದು, ಜೀವನ ಮಾರ್ಗಕ್ಕಾಗಿ ಮತ್ತೊಬ್ಬರನ್ನು ಅವಲಂಬಿಸದೆ ಸ್ವಾಭಿಮಾನದಿಂದ ಇದ್ದಷ್ಟು ಕಾಲ ಬದುಕಬಹುದು ಎನ್ನುವ ಉದ್ದೇಶವನ್ನಿಟ್ಟು ತನ್ನ ಎಲ್ಲವನ್ನೂ ಊರಿನಲ್ಲಿ ಬಿಟ್ಟು ವಿದೇಶಕ್ಕೆ ಹಾರಿ ಜೀವನ ಕಟ್ಟಲು ವ್ಯವಸ್ಥೆ ಮಾಡಿಕೊಂಡ ಕನ್ನಡ ನಾಡಿನ ಅದೆಷ್ಟೋ ಮಕ್ಕಳು .. ವಿವಿಧ ವಿದೇಶ ರಾಷ್ಟ್ರಗಳಲ್ಲಿ ನೆಲೆಕಂಡುಕೊಂಡಿದ್ದಾರೆ ಅವರಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಿ
ತಮಗೆ ಬಿಡುವಿದ್ದಾಗ ತಮ್ಮ , ಸಮುದಾಯದ, ಸಮಾಜದ ಮತ್ತು ತಾನು ಹುಟ್ಟಿ ಬೆಳೆದ ರಾಷ್ಟ್ರದ ಅಭಿವೃದ್ಧಿಗಾಗಿ ಏನಾದರು ಮಾಡಬೇಕೆನ್ನುವ ಕನಸಿನೊಂದಿಗೆ ಹಲವು ರೀತಿಯ ಸಹಾಯ ಸಹಕಾರಗಳನ್ನು ಮಾಡುತ್ತಿದ್ದ ಅನಿವಾಸಿ ಮುಸ್ಲಿಂ ಸಹೋದರರು ಅದಕ್ಕೊಂದು ಏಕೀಕೃತವಾದ ಉತ್ತಮ ವ್ಯವಸ್ಥೆ ಬೇಕು ಎಂದು ಆಲೋಚಿಸಿ ಮಹಾತ್ಮರಾದ ಉಲಮಾಗಳ ಆಶೀರ್ವಾದದೊಂದಿಗೆ
ಕಳೆದ ಐದು ವರ್ಷಗಳ ಮುಂಚೆ ಯುಎಇಯಲ್ಲಿ ಜನ್ಮ ನೀಡಿದ ಹೆಮ್ಮೆಯ ಸಂಘಟನೆಯಾಗಿದೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್* ಇದೀಗ ಯುಎಇ,ಕತ್ತಾರ್, ಒಮಾನ್, ಸೌದಿ ಅರೇಬಿಯಾ, ಬಹ್ರೈನ್, ಕುವೈತ್ ಹಾಗೂ ಮಲೇಶಿಯಾ ಮತ್ತು ಲಂಡನ್ ನಲ್ಲಿ ರಾಷ್ಟ್ರೀಯ ಸಮಿತಿಯನ್ನು ಮತ್ತು ಇವುಗಳನ್ನೊಳಗೊಂಡ ಅಂತಾರಾಷ್ಟ್ರೀಯ ಸಮಿತಿಯನ್ನೊಳಗೊಂಡಂತೆ. ತನ್ನ ಚುರುಕಿನ ಕಾರ್ಯಾಚರಣೆ ಮೂಲಕ ಹದಿನೈದು ಸಾವಿರಕ್ಕೂ ಮಿಕ್ಕ ಸದಸ್ಯರನ್ನು ಹೊಂದಿದ್ದು  ಅಹ್ಲುಸ್ಸುನ್ನತ್ ವಲ್ ಜಮಾಅತಿನ ತತ್ವ ಸಿದ್ದಾಂತದಡಿ ಪಾರಂಪರಿಕ ಇಸ್ಲಾಮಿನ ಆದರ್ಶವನ್ನು ಮುಖ್ಯ ಅಜೆಂಡಾವನ್ನಾಗಿಸಿ ಮುನ್ನಡೆಯುತ್ತಿರುವ ಸಂಘಟನೆಯಾಗಿ ಗುರುತಿಸಲ್ಪಟ್ಟಿದೆ . ಧಾರ್ಮಿಕ, ಶೈಕ್ಷಣಿಕ,ಸಾಮಾಜಿಕ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಸಂಘಟನೆಯು ತನ್ನದೇ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡಿದೆ .ಮೊದಲನೇಯದಾಗಿ  ಕುಟುಂಬದ ಆರ್ಥಿಕ ಸಬಲೀಕರಣಕ್ಕಾಗಿ ವಿದೇಶಕ್ಕೆ ತನ್ನ ಮಕ್ಕಳನ್ನು ಕಳುಹಿಸುವ.. ಅದರೊಟ್ಟಿಗೆ ನನ್ನ ಮಗ ಎರಡು ಮೂರು ವರ್ಷಗಳು ಕಳೆದು ಮರಳಿ ಬರುವಾಗ ಯಾವ ನೂತನವಾದವನ್ನು ತಲೆಗೆ ಹಚ್ಚಿ ಕೊಂಡು ಬಂದು ಕುಟುಂಬದ ಮಾನಮರ್ಯದೆ ಹರಾಜಿಗಿಡುತ್ತಾನೋ ಎನ್ನುವ ರೀತಿಯಲ್ಲಿ ಕಂಗಾಲಾಗುತ್ತಿದ್ದ ತಂದೆ ತಾಯಿಯಂದಿರಿಗೆ ಕೆಸಿಎಫ್ ನಿಂದಾಗಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ
ಸುನ್ನೀ ಜಂಇಯ್ಯತುಲ್ ಉಲಮಾದ ಮಾರ್ಗ ನಿರ್ದೇಶನದಡಿ ಕಾರ್ಯಾಚರಿಸುವ ಸಂಘಟನೆಯು ವಿದೇಶಕ್ಕೆ ತಲುಪುತ್ತಿರುವ ಯುವ ಜನತೆಯ ಈಮಾನನ್ನು ಕಾಪಾಡಲಿಕ್ಕಿರುವ ಸುವ್ಯವಸ್ಥೆಯಾಗಿ ಮಾರ್ಪಟ್ಟಿದೆ ಅಲ್ ಹಂದುಲಿಲ್ಲಾ….
ವಿಶ್ವಾಸ ಪ್ರತಿಯೊಬ್ಬ ಮುಸಲ್ಮಾನರ ಅತ್ಯಂತ ಅಮೂಲ್ಯ ಸೊತ್ತು. ತನ್ನ ಮತ್ತು ತನ್ನವರ ಈಮಾನನ್ನು ಎಲ್ಲಿಯಿದ್ದರೂ ಸಂರಕ್ಷಿಸುವ ಬಾದ್ಯತೆ ಪ್ರತಿಯೊಬ್ಬ ಸತ್ಯ ವಿಶ್ವಾಸಿಯ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಕೆಸಿಎಫ್ ಮೇಲಿನ ರಾಷ್ಟ್ರಗಳಲ್ಲಿ ತನ್ನದೇ ಆದ ಅಪಾರ ಕೊಡುಗೆಗಳನ್ನು ಅಸ್ಸುಫ್ಫ ಎನ್ನುವ ಅಧ್ಯಯನ ಸಿಲೆಬಸ್ ಮೂಲಕ ನೀಡುತ್ತಲೇ ಇದೆ. ಅಲ್ಲದೇ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಧಾರ್ಮಿಕ ಚಿಂತನೆ ಹಾಗೂ ದೀನೀ ಜ್ಞಾನದ ಗಂಧಗಾಳಿಯಿಲ್ಲದ ಪ್ರದೇಶಗಳಲ್ಲಿ ಮದ್ರಸ, ಮಸೀದಿ ,ಸ್ಥಾಪನೆಗಳನ್ನು ಎಸ್ಸೆಸ್ಸೆಫ್ ನ ಇಹ್ಸಾನ್ ಮೂಲಕ ನಿರ್ಮಿಸಿ ದೀನೀ ದಾಯಿಗಳನ್ನು ನೇಮಿಸಿ ಅವರಿಗೆ ಮಾಸಿಕ ವೇತನವನ್ನು ನೀಡುವ ಮೂಲಕ ಮಹತ್ತರವಾದ ಸಾಧನೆಯನ್ನೇ ಮಾಡುತ್ತಿದೆ
ಪವಿತ್ರವಾದ ಹಜ್ ಕರ್ಮಕ್ಕೆ ಮಕ್ಕಾಕ್ಕೆ ತೆರಳುವ ಹಜ್ಜಾಜ್ಗಳ ಸೇವೆಗಾಗಿ ದೊಡ್ಡವೊಂದು ಸ್ವಯಂ ಸೇವಕರ ವ್ಯೂಹವನ್ನು ಕಟ್ಟಿ ಕಾರ್ಯನಿರ್ವಹಿಸುತ್ತಿದ್ದು ಮನೆ ಮಾತಾಗಿದೆ.

ಅಲ್ಲದೇ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಓದುವ ವಾಂಛೆಯನ್ನು ಮುಗಿಸಲೋಸ್ಕರ ವಿದೇಶಿ ಮಣ್ಣಿನಲ್ಲಿ ಮೊಟ್ಟ ಮೊದಲ ಬಾರಿಗೆ ಗಲ್ಫ್ ಇಶಾರ ಎನ್ನುವ ಕನ್ನಡ ಪತ್ರಿಕೆ ಯೊಂದನ್ನು ನಡೆಸುತ್ತಿರುವ ಏಕೈಕ ಸಂಘಟನೆಯಾಗಿದೆ* ಕೆ.ಸಿ.ಎಫ್.

ಚಿನ್ನ, ಮನೆ, ಜಾಗವನ್ನು ಅಡವಿಟ್ಟು ಲಕ್ಷಾಂತರ  ರೂಪಾಯಿಗಳನ್ನು ವ್ಯಯಿಸಿ
ವಿದೇಶಿ ಹಣದ ಕನಸಿನೊಂದಿಗೆ ಬಂದವನಿಗೆ ಆಶ್ರಯ ನೀಡಬೇಕಾದವನ ದುರ್ವರ್ತನೆಯಿಂದಲೋ ಏಜೆನ್ಸಿಗಳ ವಂಚನೆಯಿಂದಲೋ ,ಬಯಸಿದ ಕಸುಬುಗಳು ಸಿಗದೇ ಕಂಗಾಲಾಗಿ ಹೋದ ವಿಭಾಗಕ್ಕೆ ಆಶ್ರಯ ನೀಡುತ್ತಿರುವ, ತನಗರಿವಿಲ್ಲದ ವಿದೇಶಿ ಕಾನೂನಿಗೆ ಸಿಲುಕಿ ಜೈಲಲ್ಲಿ ಕೊಳೆಯುತ್ತಿದ್ದ ಅದೆಷ್ಟೋ ಕನ್ನಡಿಗರಿಗೆ ಜಾತಿ ಧರ್ಮಗಳ ವ್ಯತ್ಯಾಸವಿಲ್ಲದೆ ಕಂಬಿಯೊಳಗಿನಿಂದ ಮುಕ್ತಿಗೊಳಿಸಿ ಮನೆಮಂದಿಗೆ ತಲುಪಿಸಿ ಅಭಯ ನೀಡುವ ಮೂಲಕ , ಇತ್ತ ಊರಿನಲ್ಲಿ ಪ್ರಕೃತಿ ವಿಕೋಪದಿಂದ ಇನ್ನಿತರ ಸಮಸ್ಯೆಗಳಿಂದ ಮನೆಮಠಗಳನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳಿಗೆ ಸೂರು ನಿರ್ಮಿಸಲು ಸಹಾಯ ಮಾಡುವ ಮೂಲಕ, ಎಲ್ಲಕ್ಕಿಂತ ಹೆಚ್ಚಾಗಿ ನೂರಾರು ಅಹ್ಲುಸ್ಸುನ್ನತಿನ ಸಂಘ ಸಂಸ್ಥೆಗಳಿಗೆ ಧನಸಹಾಯ ಮಾಡಿ ಅಭಿವೃದ್ದಿಯಲ್ಲಿ ದೊಡ್ಡ ಪಾತ್ರ ವಹಿಸುತ್ತಿರುವ ಕೆಸಿಎಫ್….. ತನ್ನ ಐದನೇ ವಾರ್ಷಿಕೋತ್ಸವದ ಪ್ರಯುಕ್ತ CONNECT 2018 ಎಂಬ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಆ ಪೈಕಿ ಕೆಸಿಎಫ್ ಯು ಎ ಇ ರಾಷ್ಟ್ರೀಯ ಸಮಿತಿಯ ವತಿಯಿಂದ ಅತ್ಯಂತ ಮಹತ್ವದ ಯೋಜನೆಯಾದ ಬಡ ಹೆಣ್ಣುಮಕ್ಕಳ ಆದರ್ಶ ವಿವಾಹ ಕಾರ್ಯಕ್ರಮವನ್ನು ನಡೆಸಲುದ್ದೇಶಿಸಿದ್ದು  ವಧುವಿಗೆ ಅಗತ್ಯವಿರುವ ಚಿನ್ನ, ವಸ್ತ್ರ, ವರನಿಗೆ ಬೇಕಾಗಿರುವ ವಿವಾಹದ ವ್ಯವಸ್ಥೆಗಳನ್ನು ಮಾಡಿ*
ಹನ್ನೊಂದು ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸುವ ಆದರ್ಶ ವಿವಾಹ ಕಾರ್ಯಕ್ರಮವು 2018 ಡಿಸೆಂಬರ್ ಮೂರನೇ ಸೋಮವಾರದಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದ್ದು  ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುವುದರೊಂದಿಗೆ ಮಾದರಿಯಾಗಲಿದೆ.
ಅದೇ ವೇದಿಕೆಯು ಸಾಮುದಾಯಿಕ ಸಬಲೀಕರಣದ ಮತ್ತೊಂದು ಕ್ಷಣಕ್ಕೆ ಸಾಕ್ಷಿಯಾಗಲಿದ್ದು
ಇಲ್ಲಿನ ಕಡುಬಡತನದಲ್ಲಿ ಮಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸೂರು ನಿರ್ಮಿಸಿ ನೀಡುವ ಮಹತ್ವಾಕಾಂಕ್ಷೆಯ ದಾರುಲ್ ಅಮಾನ್ ವಸತಿ ಯೋಜನೆಗೆ  ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ಬದ್ರುಸ್ಸಾದಾತ್ ಖಲೀಲ್ ತಂಙಳ್ ಮುಂತಾದ ಉಲಮಾ ಸಾದಾತುಗಳ ಹಾಗೂ ಉಮರಾ ಗಳ ಸಮಕ್ಷಮದಲ್ಲಿ ಚಾಲನೆ ನೀಡಲಿದೆ. ಸುಮಾರು ಹತ್ತು ಸಾವಿರ ಜನರ ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು
ಮಂಗಳೂರಿನಲ್ಲಿ ಮತ್ತೊಂದು ಇತಿಹಾಸದ ಅಧ್ಯಾಯ ತೆರೆಯಲಿದೆಎಂಬುದರಲ್ಲಿ ಸಂದೇಹವಿಲ್ಲ

ಅಂದು ಮಧ್ಯಾಹ್ನ ಎಸ್ಸೆಸ್ಸೆಫ್ ನೇತೃತ್ವದಲ್ಲಿ ಬ್ರಹತ್ ಮೀಲಾದ್ ಜಾಥಾವು ನಡೆಯಲಿದ್ದು ಸಂಜೆ ಎಸ್ ವೈ ಎಸ್ ಸಂಘಟನೆಯ ಆಶ್ರಯದಲ್ಲಿ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದೆ .ಆ ಸುಂದರ ಕ್ಷಣಗಳನ್ನು ವೀಕ್ಷಿಸಲು ಪರಮದಯಾಳುವಾದ ಅಲ್ಲಾಹನು ಕರುಣಿಸಲಿ.
ಆಮೀನ್ ಯಾರಬ್ಬಲ್ ಆಲಮೀನ್
KCF SSF SYS
SJU SEDC SJM SMA

For meadia cell
CONNECT 2018
📝 hafil yakoob saadi Navoor

error: Content is protected !! Not allowed copy content from janadhvani.com