ಬೆಳ್ಳಾರೆ(ಜನಧ್ವನಿ ವಾರ್ತೆ)ಅ-23; ದಾರುಲ್ ಹುದಾ ಬೆಳ್ಳಾರೆಯ ವತಿಯಿಂದ ನಡೆಸಲ್ಪಡುವ ಸಾದಾತ್ ಆಂಡ್ ನೇರ್ಚೆಯು ಇಂದಿನಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ದಾರುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಲಿದೆ. ಮತ ಪ್ರಭಾಷಣ, ಬುರ್ದಾ, ಕವಾಲಿ, ಖತಮುಲ್ ಖುರ್ ಆನ್, ಮೌಲಿದ್ ಹಾಗೂ ದುಆ ಸಮ್ಮೇಳನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಾದಾತ್ ಆಂಡ್ ನೇರ್ಚೆಯ ಮೆರುಗನ್ನು ಹೆಚ್ಚಿಸಲಿದೆ.
ಆರಂಭ ದಿನವಾದ ಇಂದು ಮಗ್ರಿಬ್ ನಮಾಜಿನ ಬಳಿಕ ಬಹು ನೌಫಲ್ ಸಖಾಫಿ ಕಳಸ ಪ್ರೌಢೋಜ್ವಲವಾದ ಪ್ರಭಾಷಣ ನಡೆಸಲಿದ್ದಾರೆ. ಎರಡನೇ ದಿನವಾದ ನಾಳೆ (ಅಕ್ಟೋಬರ್ 24) ಬಹು ಅಬ್ದುಲ್ಲತೀಫ್ ಸಖಾಫಿ ಕಾಂತಪುರಂರವರ ನೇತೃತ್ವದಲ್ಲಿ ಬುರ್ದಾ-ಕವಾಲಿ ನಡೆಯಲಿದ್ದು, ಕೇರಳ ರಾಜ್ಯ ಸಾಹಿತ್ಯೋತ್ಸವದಲ್ಲಿ ವಿಜೇತರಾದ ಮಹ್ಫೂಝ್ ಕಮಾಲ್ ತ್ರಿಶೂರ್, ಶಾಹಿನ್ ಬಾಬು ತಾನೂರ್, ಶಮ್ಮಾಸ್ ಕಾಂತಪುರಂ ಹಾಗೂ ಅಷ್ಕರ್ ವಡಕ್ಕೇಕಾಡ್ ಮುಂತಾದವರು ಶುಷ್ರಾವ್ಯ ಕವಾಲಿಯ ಮೂಲಕ ಪರಿಸರದಲ್ಲಿ ಪ್ರವಾದಿ ಪ್ರೇಮದ ಸಂಚಲನ ಮೂಡಿಸುವರು.
ಸಮಾರೋಪ ದಿನವಾದ ಗುರುವಾರ (ಅಕ್ಟೋಬರ್ 25)ದಂದು ಪೂರ್ವಾಹ್ನ 9 ಗಂಟೆಗೆ ಖತಮುಲ್ ಖುರ್-ಆನ್ ಮತ್ತು ಮೌಲಿದ್ ನಡೆಯಲಿದ್ದು, ಸಯ್ಯಿದ್ ಖಾಸಿಮ್ ಅಲ್ ಅಹ್ದಲ್ ತಂಙಳ್ ಕೋಝಿಕ್ಕೋಡ್ ರವರು ನೇತೃತ್ವ ನೀಡುವರು. ಅದೇ ದಿನ ಮಧ್ಯಾಹ್ನ ಎರಡು ಗಂಟೆಗೆ “ಇಲಾ ಸಬೀಲಿ ರಬ್ಬಿಕ” ಎಂಬ ದಅವಾ ಸೆಶನ್ ನಲ್ಲಿ ಎಸ್. ಪಿ ಹಂಝ ಸಖಾಫಿಯವರು ‘ದಅವಾ ರಂಗದ ಹೊಸ ರೂಪರೂಪಗಳು’ ಎಂಬ ವಿಷಯದಲ್ಲಿ ಸವಿಸ್ತರ ವಿವರಿಸುವರು. ಸಾಯಂಕಾಲ 5 ಗಂಟೆಗೆ ಅಸ್ಸಯ್ಯಿದ್ ಸಂಶುದ್ದೀನ್ ಬಾಅಲವಿ ತಂಙಳ್ ಮಂಜೇಶ್ವರರವರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ನಡೆಯಲಿರವುದು.
ಸಮಾರೋಪ ಸಮಾರಂಭವು ಮಗ್ರಿಬ್ ನಮಾಜಿನ ಬಳಿಕ ನಡೆಯಲಿದ್ದು, ಜಾಮಿಯಾ ಮರ್ಕಝ್ ಅಧ್ಯಕ್ಷರಾದ ಸಯ್ಯಿದ್ ಅಲೀ ಬಾಫಖೀ ತಂಙಳ್ ಕೊಯಿಲಾಂಡಿ ಪ್ರಾರ್ಥನೆಗೆ ನೇತೃತ್ವ ನೀಡುವರು. ದಾರುಲ್ ಹುದಾ ರೂವಾರಿ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರು ಅಧ್ಯಕ್ಷತೆ ವಹಿಸಲಿದ್ದು, ಪಾಣಕ್ಕಾಡ್ ಸಯ್ಯಿದ್ ಪಿ.ಎಂ.ಎಸ್ ನಸೀರ್ ಶಿಹಾಬ್ ತಂಙಳ್ ರವರು ಸಮಾರಂಭವನ್ನು ಉದ್ಘಾಟಿಸುವರು. ಸಮಾರಂಭದಲ್ಲಿ ಅಬ್ದುಲ್ಲತೀಫ್ ಸಅದಿ ಫಯಶ್ಶಿ ಮುಖ್ಯ ಭಾಷಣ ಮಾಡಲಿದ್ದು, ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿಯವರು ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡುವರು. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಕುಂಞಕೋಯ ತಂಙಳ್ ಸಅದಿ ಸುಳ್ಯ, ಬಿ.ಎಸ್ ಅಬ್ದುಲ್ಲಾ ಕುಂಞಿ ಫೈಝಿ, ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ, ಕೆ.ಎಂ ಸಿದ್ದೀಖ್ ಮೋಂಟುಗೋಲಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಮುಂತಾದ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.