ಕ್ಯಾಲಿಕಟ್: ನವಂಬರ್ 25 ರಂದು ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನವನ್ನು ಮರ್ಕಝ್‍ನಲ್ಲಿ ಆಯೋಜಿಸಲು ಸಮಿತಿ ನಿರ್ಧರಿಸಿದೆ. ಅಕ್ಟೋಬರ್ 21ರಂದು ಈ ಸಮಾರಂಭದ ಸ್ವಾಗತ ಸಮಿತಿ ರಚನೆ ಮರ್ಕಝಿನಲ್ಲಿ ನಡೆಯಲಿದೆ. ಮರ್ಕಝ್ ಪ್ರೆಸಿಡೆಂಟ್ ಸಯ್ಯಿದ್ ಅಲಿ ಬಾಫಖೀ ತಂಙಳ್‍ರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯನ್ನು ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟನೆ ನಡೆಸಿದರು. ಮರ್ಕಝ್ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಡೆರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್‍ಹರಿ ಮಂಡಿಸಿದರು.
ಹಲವು ವಿದ್ವಾಂಸರು ಹಾಗೂ ಪ್ರವಾದೀ ಕೀರ್ತನಾ ತಂಡಗಳ ಸಾನಿಧ್ಯದಲ್ಲಿ 2004 ರಿಂದ ಮರ್ಕಝ್ ನಡೆಸುತ್ತಿರುವ ಅಂತರ್ರಾಷ್ಟ್ರೀಯ ಮೀಲಾದ್ ಸಮ್ಮೇಳನ ಪ್ರವಾದಿ ಪ್ರೇಮದ ಹೊಸ ಆವಿಷ್ಕಾರಗಳನ್ನು ಭಾರತದಲ್ಲಿ ಮೂಡಿಸಿದೆ. ಮರ್ಕಝ್ ರೂವಾರಿ ಎ ಪಿ ಅಬೂಬಕ್ಕರ್ ಮುಸ್ಲಿಯಾರರ ಮೀಲಾದ್ ವಾರ್ಷಿಕ ಭಾಷಣ ಸಮ್ಮೇಳನಕ್ಕೆ ಮೆರುಗು ನೀಡುತ್ತದೆ. ಈ ವರ್ಷವೂ ಹಲವು ಪ್ರಸಿದ್ಧ ವಿದ್ವಾಂಸರ ಸಾನಿಧ್ಯದಲ್ಲಿ ಸಮ್ಮೇಳನ ಯಶಸ್ವಿಯಾಗಲಿದೆ.