ಬೆಂಗಳೂರು; “ಯವ್ವನ ಮರೆಯಾಗುವ ಮುನ್ನ” ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ)ssf ಹಮ್ಮಿಕೊಂಡು ಬರುವ ಸದಸ್ಯತ್ವ ಅಭಿಯಾನವು ನವೆಂಬರ್ -1 ರಿಂದ 15 ರ ವರೆಗೆ ರಾಜ್ಯಾದ್ಯಂತ ನಡೆಯಲಿದ್ದು ಅದರ ಪ್ರಯುಕ್ತ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ “ಎಲೆಕ್ಷನ್ ವರ್ಕ್ ಶಾಪ್” ಕಾರ್ಯಕ್ರಮವು ಬೆಂಗಳೂರಿನ IBEI ಕಛೇರಿಯಲ್ಲಿ ದಿನಾಂಕ ಅಕ್ಟೋಬರ್ -7 ರಂದು ಜಿಲ್ಲಾ ಎಲೆಕ್ಷನ್ ಕಮಿಟಿ ಚಯರ್ ಮ್ಯಾನ್ ಹಬೀಬುಲ್ಲ ನೂರಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಂದಿನ ವರ್ಷದ ನೂತನ ಸಮಿತಿಯನ್ನು ಕಾರ್ಯರೂಪಕ್ಕೆ ತರುತ್ತಿದ್ದು ಅದರ ಕಾರ್ಯವೈಖರಿಯ ಕುರಿತು ಸಂಕ್ಷಿಪ್ತ ವಿವರಣೆಯನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಪ್ರ.ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಉದ್ಘಾಟನೆಯನ್ನು ನೆರವೇರಿಸಿ,ರಾಜ್ಯ ಸದಸ್ಯ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಪ್ರಾಸ್ತಾವಿಕ ಭಾಷಣ ಮಾಡಿದರು.ರಾಜ್ಯ ಎಲೆಕ್ಷನ್ ಕಮಿಟಿ ಕನ್ವೀನರ್ ಹಾಫಿಳ್ ಯಾಕುಬ್ ಸಅದಿ ಮುಖ್ಯ ತರಭೇತಿನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ,ರವೂಫ್,ಜಿಲ್ಲ ಅಧ್ಯಕ್ಷ ತಾಜುದ್ದೀನ್ ಫಾಳಿಲಿ,ಹಾಗೂ ಜಿಲ್ಲಾ
ಡಿವಿಷನ್ ನಾಯಕರು ಹಾಗೂ ಆಯ್ಕೆಗೊಂಡ ಎಲ್ಲಾ ಯುನಿಟ್ ಎಲೆಕ್ಷನ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ಶಿಹಾಬ್ ಮಡಿವಾಳ ಸ್ವಾಗತಿಸಿ ವಂದಿಸಿದರು.
ವರದಿ:-ಶಿಹಾಬ್ ಮಡಿವಾಳ