(ಜನಧ್ವನಿ ವಾರ್ತೆ): ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್ ಮುಖಾಂತರ ದೈನಂದಿನವೂ ಹದೀಸ್ ವಚನಗಳನ್ನು, ಇಸ್ಲಾಮಿಕ್ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುತಿದೆ. ಇದರ ಅಧೀನದಲ್ಲಿ ಇಸ್ಲಾಮಿಕ್ ವಿಷಯಗಳಿಗೆ ಸಂಬಂಧಿಸಿದಂತೆ, ನಾವು ಕಲಿತ ವಿಷಯಗಳನ್ನು ಪುನಃ ನೆನಪಿಸುವ ಉದ್ದೇಶದಿಂದ ಇಸ್ಲಾಮಿಕ್ ಕ್ವಿಝ್ ಪ್ರೋಗ್ರಾಂ ಆಯೋಜಿಸಲಾಗಿತ್ತು. ವಾಟ್ಸಾಪ್‌ನ ಮುಖಾಂತರ ನಡೆದ ಕ್ವಿಝ್ ಕಾರ್ಯಕ್ರಮವು ಖುರ್‌ಆನ್, ಫಿಕ್ಹ್ , ಚರಿತ್ರೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿದ್ದವು. ವಾಟ್ಸಾಪ್ ಮುಖಾಂತರ ನಡೆಯುವ ಕ್ವಿಝ್ ಆಗಿದ್ದರೂ, ಇನ್ನಷ್ಟು ಜನರಿಗೆ ತಲುಪಿಸುವ ಸಲುವಾಗಿ ಫೇಸ್‌ಬುಕ್ ಪೇಜ್’ನಲ್ಲೂ ಹಾಕಲಾಗುತ್ತಿತ್ತು. ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್’ನ ಮೊದಲ ಪ್ರಯತ್ನವು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿದ್ದಲ್ಲದೇ, ತುಂಬಾ ಜನರಿಗೆ ಇಲ್ಮ್ ಕಲಿಯಲು ದಾರಿ ಮಾಡಿಕೊಟ್ಟಿದ್ದರಲ್ಲಿ ಎರಡು ಮಾತಿಲ್ಲ. ವಿಜೇತರಿಗೆ ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್‌ನ ಪ್ರಶಸ್ತಿ ಪತ್ರ, ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ.
ಇಸ್ಲಾಮಿಕ್ ಸಂದೇಶ ಸುನ್ನೀ ಪೇಜ್ ಆಯೋಜಿಸಿರುವ ಇಸ್ಲಾಮಿಕ್ ಕ್ವಿಝ್‌ನಲ್ಲಿ ವಿಜೇತರಾದವರು,
ಪ್ರಥಮ– ನಾಸಿರ್ ಸಜಿಪ. ದ್ವಿತೀಯ– ಅನ್ಸಾರ್ ಸೈದು ಮತ್ತು ಅಬ್ದುಲ್ ವದೂದ್ ಅಕ್ರಂ.
ತೃತೀಯ– ಶಮೀರ್ ಸುಳ್ಯ, ಮುಹಮ್ಮದ್ ಸುಳ್ಯ, ಅಬ್ದುರ್ರಹ್ಮಾನ್ ಸಾಜಿದ್, ಖಲಂದರ್ ರಝ್ವಿ ಬೆಜ್ಜವಳ್ಳಿ, ಸುಮಯ್ಯಾ ಬಾನಬೆಟ್ಟು, ಆಯೀಶಾ ಪಿ.
ವಿಜೇತರೆಲ್ಲರಿಗೂ ಇಸ್ಲಾಮಿಕ್ ಸಂದೇಶ ಸುನ್ನಿ ಫೇಸ್‌ಬುಕ್ ಪೇಜ್ ವತಿಯಿಂದ ಅಭಿನಂದನೆಗಳು.
ವರದಿ: ಅಡ್ಮಿನ್ ವಿಭಾಗ-
ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್
💐👍
Maa shaa Allah.
Congrats 💐💐