ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ದಕ್ಷಿಣ ಕನ್ನಡ,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಕ್ರೀಯ ಕಾರ್ಯಕರ್ತರಿಗಾಗಿ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ ಎಸ್ಸೆಸ್ಸೆಫ್ ಉಡುಪಿ ಜಲ್ಲಾಧ್ಯಕ್ಷ ಆಶ್ರಫ್ ರಝಾ ಅಂಜದಿ ಪಕ್ಷಿಕೆರೆ ರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 4 ಗುರುವಾರ ಮಧ್ಯಾಹ್ನ 2:00 ಗಂಟೆಗೆ ಖಾಝಿ ಭವನ ಮೂಳೂರು,ಉಡುಪಿಯಲ್ಲಿ ನಡೆಯಲಿರವುದು.
ಮೂಳೂರು ಜುಮ್ಮಾ ಮಸ್ಜಿದ್ ಮುದರಿಸ್ ಬಿ.ಕೆ.ಅಬ್ದುಲ್ ರಹ್ಮಾನ್ ಮದನಿ ದುಆ: ನೆರವೇರಿಸಲಿದ್ದಾರೆ.
ಇಹ್ಸಾನ್ ಕರ್ನಾಟಕ ಕನ್ವೀನರ್ ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ ಉದ್ಘಾಟಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ತರಗತಿಯನ್ನು ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ,ರಾಜ್ಯ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ,ರವೂಫ್ ಖಾನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.