ಬೆಳ್ಳಾರೆ: ಎಸ್ಸ್ ಎಸ್ಸ್ ಎಫ್ ಇದರ ಅಂತಾರಾಷ್ಟ್ರೀಯ ಸಂಘಟನೆಯಾದ ಕೆ.ಸಿ.ಎಫ್ ಬಹರೈನ್ ಘಟಕವು ಸಂಗ್ರಹಿಸಿದ್ದ ಸಾಂತ್ವನ ನಿಧಿಯನ್ನು ಬೆಳ್ಳಾರೆ ಸಮೀಪದ ಪಾಲ್ತಾಡು ನಿವಾಸಿಯಾದ ಆಸಿಫ್ ಅವರ ಕುಟುಂಬಕ್ಕೆ ಬಹರೈನ್ ಘಟಕದ ಕೋಶಾಧಿಕಾರಿಯಾದ *ಅಬ್ದುಲ್ ಅಝೀಝ್ ಸುಳ್ಯ* ರವರು ಹಸ್ತಾಂತರಿಸಿದರು. ಆಸಿಫ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು ,ಪ್ರಸ್ತುತ ಸಂದರ್ಭದಲ್ಲಿ ಕೆ.ಸಿ.ಎಫ್ ನೆರವಿಗೆ ಧಾವಿಸಿದ್ದು ಅವರ ಕುಟುಂಬದಲ್ಲಿ ಮಂದಹಾಸ ಬೀರುವಂತಾಗಿದೆ…ಆಸಿಫ್ ಅವರು ಕೆ.ಸಿ.ಎಫ್ ಇದರ ಕಾರ್ಯಕರ್ತರು ಕೂಡ ಆಗಿದ್ದರು
ಪ್ರಸ್ತುತ ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಮಾ ಸಂಸ್ಥೆಯ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ, SYS ಬೆಳ್ಳಾರೆ ಬ್ರಾಂಚ್ ಅಧ್ಯಕ್ಷರಾದ ಮಹ್ಮೂದ್ ಬಿ.ಎ, SSF ಬೆಳ್ಳಾರೆ ಶಾಖಾಧ್ಯಕ್ಷರಾದ ಖದೀರ್ ಬಿಸ್ಮಿಲ್ಲಾ, ಹಾಗೂ ಆಲ್ಫಾ ಹಮೀದ್ ಅವರು ಉಪಸ್ಥಿತರಿದ್ದರು.