janadhvani

Kannada Online News Paper

ಕೆಸಿಎಫ್ ಒಮಾನ್ ನಿಝ್ವ ಝೋನ್: ಬೀಳ್ಕೋಡುಗೆ ಸಮಾರಂಭ

ಕೆಸಿಎಫ್ ಒಮಾನ್ ನಿಝ್ವ ಝೋನ್ ವತಿಯಿಂದ ಸ್ವಲಾತ್ ಮಜ್ಲಿಸ್ ಹಾಗು ಬೀಳ್ಕೋಡುಗೆ ಸಮಾರಂಭವು ಇತ್ತೀಚೆಗೆ ಪರ್ಕ್ ಇಮಾಮ್ ಜಾಬಿರ್ ಬಿನ್ ಝೈದ್ ಮಸೀದಿಯಲ್ಲಿ ಬಹು ಅಬ್ದುರ್ರಹಿಮಾನ್ ಸಖಾಫಿ ಇವರ ನೇತೃತ್ವದಲ್ಲಿ ನಡೆಯಿತು. ಸುಮಾರು ಮೂವತ್ತೈದು ವರ್ಷಗಳಿಂದ ಒಮಾನಿನಲ್ಲಿ ದುಡಿಯುತ್ತಿದ್ದ ಕೆಸಿಎಫ್ ನಿಝ್ವ ನಾಯಕರಾದ ಮುಹಮ್ಮದ್ ಅಡ್ಯಾರ್ ಕಣ್ಣೂರು ಇವರನ್ನು ಕೆಸಿಎಫ್ ನಿಝ್ವ ಝೋನ್ ವತಿಯಿಂದ ಬೀಳ್ಕೋಡಲಾಯಿತು. ಪ್ರಸ್ತುತ ಸಮಾರಂಭದಲ್ಲಿ ಸುಲೈಮಾನ್ ಸಖಾಫಿರವರು ಮುಹರ್ರಮ್ ಪ್ರಾಮುಖ್ಯತೆಯನ್ನು ವಿವರಿಸಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಕೊಶಾಧಿಕಾರಿ ಕಾಸಿಂ ಹಾಜಿ, ಸಯ್ಯದ್ ಸೈಫುದ್ದೀನ್ ಅಲ್ ಹೈದ್ರೋಸಿ ಕೊಡಗು, ಝೋನ್ ಅಧ್ಯಕ್ಷರಾದ ಕಲಂದರ್ ಬಾಷ, ಇಬ್ರಾಹಿಮ್ ಕಟ್ಪಾಡಿ, ಅಬ್ದುಲ್ ಹಮೀದ್ ಕನ್ನಂಗಾರ್, ಹಾಗೂ ಝೋನ್ ಸದಸ್ಯರು ಪಾಲ್ಗೊಂಡಿದ್ದರು.