ಮಂಜನಾಡಿ:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಟೀಮ್ ಹಸನೈನ್ ಟ್ರೈನಿಂಗ್ ಕ್ಯಾಂಪ್ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆರವರ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ವಿದ್ಯಾ ಸಂಸ್ಥೆ ಮಂಜನಾಡಿಯಲ್ಲಿ ನಡೆಯಿತು.
ಅಲ್-ಮದೀನಾ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ಹಾಗೂ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ತರಗತಿಯನ್ನು ನಡೆಸಿದರು.
ಕ್ಯಾಂಪ್ ನಲ್ಲಿ ಬ್ಯಾನರ್ ಬರೆಯುವ ಪ್ರಾಯೋಗಿಕ ತರಗತಿಯನ್ನು ಶರೀಫ್ ಬೆಂಗಳೂರು ಹಾಗೂ ಇಕ್ಬಾಲ್ ಮಂಗಳಪೇಟೆ ರವರ ನೇತೃತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಸಲೀಮ್ ಹಾಜಿ ಬೈರಿಕಟ್ಟೆ,ಜಿಲ್ಲಾ ಸದಸ್ಯರಾದ ರಶೀದ್ ಹಾಜಿ ವಗ್ಗ,ಶರೀಫ್ ಸಖಾಫಿ ಉಪ್ಪಿನಂಗಡಿ,ಕಾಸಿಂ ಮುಸ್ಲಿಯಾರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ನಾಯಕ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ,ಕೊನೆಗೆ ವಂದಿಸಿದರು.