ಮುಡಿಪು:ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಸಾರಥ್ಯದಲ್ಲಿ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ಜಂಟಿ ಆಶ್ರಯದಲ್ಲಿ ಯೇನೆಪೋಯ ಹಾಸ್ಪಿಟಲ್ ದೇರಳಕಟ್ಟೆ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಎಜ್ಯು ಪಾರ್ಕ್ ಮುಡಿಪುವಿನಲ್ಲಿ ನಡೆಯಿತು.
ಎಜ್ಯು ಪಾರ್ಕ್ ಮೇನೇಜರ್ ಸಯ್ಯದ್ ಜಲಾಲುದ್ದೀನ್ ತಂಙಳ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ,ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ ಮುನ್ನುಡಿ ಭಾಷಣ ಮಾಡಿದರು.ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ,ಕೋಶಾಧಿಕಾರಿ ಶರೀಫ್ ಮುಡಿಪು,ಮುಡಿಪು ಸೆಕ್ಟರ್ ಅಧ್ಯಕ್ಷ ಹುಸೈನ್ ಸಖಾಫಿ,ಬಾಳೆಪುಣಿ ಸೆಕ್ಟರ್ ಅಧ್ಯಕ್ಷ ಅಝೀಝ್ ಎಚ್.ಕಲ್,ಯೇನೆಪೋಯ ಆಸ್ಪತ್ರೆಯ ಡಾ! ಶರೀಫ್,ಇಕ್ಬಾಲ್ ಮಧ್ಯನಡ್ಕ,ಸಿದ್ದೀಕ್ ಸಖಾಫಿ ಕಾಯಾರ್ ,ಶರೀಫ್ ಸ ಅದಿ ಸಂಬಾರತೋಟ,ಹಕೀಂ ಪುಮಣ್ಣ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಸ್ವಾಗತಿಸಿ,ಕೊನೆಗೆ ವಂದಿಸಿದರು.