janadhvani

Kannada Online News Paper

ಸಾಲೆತ್ತೂರು: ಪಂಜರಕೋಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್:15; ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಪಂಜರಕೋಡಿ ರಿಫಾಇಯ್ಯಾ ಜುಮ್ಮಾ ಮಸೀದಿ ವಠಾರದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು SSF ಮತ್ತು SYS ವತಿಯಿಂದ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ಮಣ್ಣಗದ್ದೆ ಧ್ವಜಾರೋಹಣವನ್ನು ನೆರವೇರಿಸಿದರು.ಸ್ಥಳೀಯ ಖತೀಬ್ ಅಬೂಬಕರ್ ಮದನಿ ಪಂಜರಕೋಡಿ ಸಂದೇಶ ಭಾಷಣ ಮಾಡಿದರು. ರಿಫಾಇಯ್ಯಾ ಜುಮ್ಮಾ ಮಸೀದಿ ಅಧ್ಯಕ್ಷ ಮಜೀದ್ ಕಲ್ಲಕಟ್ಟ, ಮುಅಲ್ಲಿಂ ಶರೀಫ್ ಹನೀಫಿ ಮಾರ್ನಾಡ್, ಜುಮ್ಮ ಮಸೀದಿ ಗೌರವಾಧ್ಯಕ್ಷ ಇಬ್ರಾಹಿಂ ಪಂಜರಕೋಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಉಮ್ಮರ್ ಅಬ್ಬೆಮ್ಮಾರ್ ಸ್ವಾಗತಿಸಿ, ವಂದಿಸಿದರು.