janadhvani

Kannada Online News Paper

ಮಲ್ಜಅ್ ಉಜಿರೆ ಸಂಸ್ಥೆಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ಆಚರಣೆ

ಉಜಿರೆ: ಸಯ್ಯದ್ ಉಜಿರೆ ತಂಙಳ್ ಸಾರಥ್ಯದ ಮಲ್ ಜ ಉದ್ದುಆತಿ ವದ್ದಅ್ ವತಿಲ್ ಇಸ್ಲಾಮಿಯ್ಯ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಹಿಯುದ್ದೀನ್ ಜುಮಾ ಮಸೀದಿ ಇದರ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್,ಮುಗುಳಿ ಯವರು ಧ್ವಜಾರೋಹಣ ನೆರವೇರಿಸಿದರು.ಮಲ್ಜ ಸಂಸ್ಥೆಯ ಜನರಲ್ ಮ್ಯಾನೇಜರ್ ಮೆಹಬೂಬ್ ಸಖಾಫಿ,ಕಿನ್ಯಾ ರವರು ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ ಸಂಸ್ಥೆಯ ಹಿತೈಷಿಗಳು,SSFನ ಕಾರ್ಯಕರ್ತರು ,ಮುತ ಅಲ್ಲಿಮರು ಹಾಜರಿದ್ದರು.
ಮಲ್ಜ ಅ್ ಸಂಸ್ಥೆಯ ಸಂಪರ್ಕ ಅಧಿಕಾರಿಯಾದ ಶರೀಫ್,ಬೆರ್ಕಳ ಸ್ವಾಗತಿಸಿದರು ಕೊನೆಯಲ್ಲಿ ಎಂ.ಮುಬೀನ್,ಉಜಿರೆ ಯವರು ವಂದಿಸಿದರು.

ವರದಿ: ಎಂ.ಎಂ.ಉಜಿರೆ