janadhvani

Kannada Online News Paper

ಅಲ್ ಖಾದಿಸ ‘ಫ್ರೀಡಂ-72’ ಕಾರ್ಯಕ್ರಮ ಸಮಾಪ್ತಿ

ಕಾವಳಕಟ್ಟೆ: ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ‘ಫ್ರೀಡಂ-72’ ಅಲ್ ಖಾದಿಸ ಕ್ಯಾಂಪಸ್ ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾl ಮುಹಮ್ಮದ್ ಫಾಝಿಲ್‌ ರಝ್ವಿ ಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಕಾವಳಕಟ್ಟೆ ಹಝ್ರತ್ ಧ್ವಜಾರೋಹಣ ಮಾಡಿದರು. ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರ್ ಸಭೆಯನ್ನು ಉದ್ಘಾಟಿಸಿದರು. ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್
ಪ್ರಾಂಶುಪಾಲರಾದ ಹಾಫಿಝ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡಿದರು.
ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾಷಣ,ಕವನ ವಾಚನ,ಕಥಾಪ್ರಸಂಗ ಹಾಗೂ ನಅತೇ ಶರೀಫ್ ನಡೆಸಿಕೊಟ್ಟರು.
ವೇದಿಕೆಯಲ್ಲಿ ಕತರ್ ಸಮಿತಿ ಸದಸ್ಯ ಅಶ್ರಫ್ ಕಾವಳಕಟ್ಟೆ, ಸಂಸ್ಥೆಯ ಮುದರ್ರಿಸರಾದ ಅಬ್ದುಲ್ ರಶೀದ್ ಸಅದಿ ಅಲ್ ಅಫ್ಲಲಿ, ಶಫೀಖ್ ಸಖಾಫಿ, ಅತಾವುಲ್ಲಾ ರಝ್ವಿ, ಸಾಜಿದ್ ಸಖಾಫಿ, ಪ್ರಾಧ್ಯಾಪಕರಾದ ಹಾರಿಸ್ ಬಾಂಬಿಲ, ಅಬ್ದುರ್ರಶೀದ್ ಮಡಂತ್ಯಾರ್ ಉಪಸ್ಥಿತರಿದ್ದರು.
ಮುಹಮ್ಮದ್ ಮುಬಶ್ಶಿರ್ ಮುಈನಿ ಸಖಾಫಿ ಯವರು ಸ್ವಾಗತಿಸಿ,ವಂದಿಸಿದರು.