janadhvani

Kannada Online News Paper

ಕೆಮ್ಮಾರ ಜುಮಾ ಮಸೀದಿಯಲ್ಲಿ ಅದ್ದೂರಿಯ ಸ್ವಾತಂತ್ರ್ಯೋತ್ಸವ ಆಚರಣೆ

ಕೆಮ್ಮಾರ: ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಮ್ಮಾರ ಮುಹ್ಯಿಯುದ್ದೀನ್ ಜುಮಾ ಮಸೀದಿಯಲ್ಲಿ ಆಚರಿಸಲಾಯಿತು.ಜಮಾ‌ಅತ್ ಅಧ್ಯಕ್ಷರಾದ ಜನಾಬ್ ಇಸ್ಮಾಯೀಲ್ ಕೆಮ್ಮಾರ ದ್ವಜಾರೋಹಣ ನಿರ್ವಹಿಸಿದರು. ಸ್ಥಳೀಯ ಮದ್ರಸ SBS ವಿದ್ಯಾರ್ಥಿಗಳು ಸಾರೇ ಜಹಾಂಸೆ ಮತ್ತು ರಾಷ್ಟ್ರಗೀತೆ ಹಾಡಿದರು. ಸ್ವಾತಂತ್ರ್ಯ ದಿನ ಪ್ರತಿಜ್ಞೆ ಸ್ವೀಕರಿಸದರು. ಸ್ಥಳೀಯ ಇಮಾಮರಾದ ಮುಹಮ್ಮದ್ ಇಲ್ಯಾಸ್ ಸಖಾಫಿ ಮಾಡನ್ನೂರು ಸಂದೇಶ ಭಾಷಣ ಮಾಡಿದರು.ಎಸ್ಸೆಸ್ಸಫ್ ಕೆಮ್ಮಾರ, ಎಸ್‌ವೈಎಸ್ ಕೆಮ್ಮಾರ, ಜಮಾಅತ್ ಕಮಿಟಿ ಸದಸ್ಯರು, ಮದ್ರಸ ಮುಖ್ಯೋಪಾಧ್ಯಯರಾದ ಅಬ್ದುಲ್ ಬಶೀರ್ ಮದನಿ ಮತ್ತಿತರು ಹಾಜರಿದ್ದರು