ಮೊಂಟೆಪದವು:ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ವತಿಯಿಂದ ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಯೇನೆಪೋಯ ಹೋಮಿಯೋಪತಿ,ಆಯುರ್ವೇದಿಕ್ ಆಸ್ಪತ್ರೆ ನರಿಂಗಾನ ಇದರ ಸಹಭಾಗಿತ್ವದಲ್ಲಿ ತಾಜುಲ್ ಉಲಮಾ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಗಸ್ಟ್ 4 ಶನಿವಾರ ಬೆಳಿಗ್ಗೆ 9 ಗಂಟೆಯಿಂದ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನರಿಂಗಾನ ಮೊಂಟೆಪದವುವಿನಲ್ಲಿ ನಡೆಯಲಿರವುದು.
ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ರವರು ಅಧ್ಯಕ್ಷತೆ ವಹಿಸಲಿರುವರು.ಕರ್ನಾಟಕ ಸರಕಾರ ನಗರಾಭಿವೃದ್ದಿ ಹಾಗೂ ವಸತಿ ಸಚಿವರಾದ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ,ಅಬ್ದುಲ್ ಜಲೀಲ್ ಮೋಂಟುಗೋಳಿ,ಸಂತೋಷ್ ಸರ್,ವಸಂತ ಸರ್ ಕೋಡಿ,ಮರಿಕ್ಕಳ ಶಾಖಾಧ್ಯಕ್ಷ ಮನ್ಸೂರು ಹಿಮಮಿ ಮುನ್ನುಡಿ ಭಾಷಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಗೋಡಿ,ಮುರಳೀದರ ಶೆಟ್ಟಿ,ಎಸ್.ಎಂ ಮಹಮ್ಮದ್,ಫಯಾಝ್ ಮೊಂಟೆಪದವು,ಆಲಿಕುಂಞಿ ಅಗಲ್ತಬೆಟ್ಟು,ಚಂದ್ರಶೇಖರ ಶೆಟ್ಟಿ ಮರಿಕ್ಕಳ,ಪಿಲಿಫ್ ಡಿ ಸೋಜ,ಗೋಪಾಲ ಭಟ್,ಇರ್ಷಾದ್ ಮದನಿ ಮೊಂಟೆಪದವು,ಅಬ್ದುಲ್ ರಹಿಮಾನ್ ಚಂದಹಿತ್ತಿಲು ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ ಎಂದು ಅಝರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.