ಅಬುಧಾಬಿ: ಅಬುಧಾಬಿಯ ರಸ್ತೆಗಳಲ್ಲಿ ವೇಗದ ಮಿತಿಗಿಂತಲೂ ಗೆಂಟೆಗೆ 20 ಕಿ.ಮೀ ಹೆಚ್ಚಿನ ವೇಗದಲ್ಲಿ ಪ್ರಯಾಣಿಸಲು ನೀಡಲಾಗಿದ್ದ ಅನುಮತಿಯನ್ನು ಆಗಸ್ಟ್ 12 ರಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲದೆ, ಸಣ್ಣ ಪುಟ್ಟ ರಸ್ತೆಗಳಲ್ಲೂ ಈ ಅನುಮತಿ ಜಾರಿಯಲ್ಲಿತ್ತು. ಗಂಟೆಗೆ 100 ಕಿ.ಮೀ. ವೇಗಮಿತಿಯನ್ನು ಕ್ರಮೀಕರಿಸಲಾದ ರಸ್ತೆಯಲ್ಲಿ 120 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾಗಿತ್ತು.
ಆದರೆ, ಆಗಸ್ಟ್ 12 ರಿಂದ, ಅಬುಧಾಬಿ ಮಾರ್ಗಗಳಲ್ಲಿ ಎಲ್ಲಾ ರೇಡಾರ್ಗಳೂ ರಸ್ತೆಗಳಲ್ಲಿ ಅಳವಡಿಸಲಾದ ವೇಗಮಿತಿಯನ್ನು ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು. ನಗರದಲ್ಲಿ ಗರಿಷ್ಠ ವೇಗವು ಗಂಟೆಗೆ 60 ಕಿ.ಮೀ. ಮತ್ತು 80 ಕಿ.ಮೀ. ಆಗಿರುತ್ತದೆ. ಅಲ್ಲಿ ಒಂದು ಕಿಲೋಮೀಟರ್ ಹೆಚ್ಚಿನ ವೇಗ ಕೂಡಾ ಟ್ರಾಫಿಕ್ ಕಾನೂನು ಉಲ್ಲಂಘನೆಯಾಗಿದ್ದು, ದಂಡ ಪಾವತಿಸಬೇಕಾದ ಅಪರಾಧವಾಗಿದೆ.
ಅಬುಧಾಬಿ ರಸ್ತೆಗಳಲ್ಲಿನ ಅಪಘಾತಗಳು ಮತ್ತು ಉಲ್ಲಂಘನೆಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಬುಧಾಬಿ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಮುಹಮ್ಮದ್ ಖಲ್ಫಾನ್ ಅಲ್ ರುಮೈದಿ ತಿಳಿಸಿದ್ದಾರೆ.