ಪುತ್ತೂರು :ಕ್ಯಾಂಪಸ್ ಜೀವನವು ಓರ್ವ ವಿಧ್ಯಾರ್ಥಿಯನ್ನು ಉತ್ತಮನನ್ನಾಗಿಯೂ ಅಥವಾ ಕೆಟ್ಟವನಾಗಿಯೂ ವ್ಯಕ್ತಿತ್ವವನ್ನು ರೂಪಿಸುವ ವಾಸ್ತವಿಕ ಸತ್ಯವಾಗಿದೆ. ಪ್ರಸ್ತುತ ಕ್ಯಾಂಪಸ್ ನೊಳಗಿನ ಸ್ಥಿತಿಗತಿಗಳು ಅತೀ ಹೆಚ್ಚು ಒತ್ತಡಕ್ಕೀಡಾಗುವಂತೆ ಮಾಡುತ್ತಿರುವುದು ಹೆತ್ತವರನ್ನಾಗಿದೆ. ವಿಧ್ಯಾಭ್ಯಾಸಕ್ಕೆ ತೆರಲುವ ವಿಧ್ಯಾರ್ಥಿ ಶಾಪಿಂಗ್ ಮಾಲ್ ಗಳಲ್ಲೂ, ಪಾರ್ಕ್ ಗಳಲ್ಲೂ ,ಸಿನೇಮಾ ಥಿಯೇಟರ್ಗಳಲ್ಲೂ, ಪ್ರತಿಭಟನೆಗಳಲ್ಲೂ ಕಾಣ ಸಿಗುತ್ತಿರುವುದು ವಿಧ್ಯಾರ್ಥಿ ಜೀವನದ ಗುರಿಯನ್ನು ಮರೆತಿರುವ ಕಾರಣವಾಗಿದೆ.
ಪರಸ್ಪರ ಸಹೋದರರಾಗಿ ಸೌಹಾರ್ದಯುತವಾಗಿ ನೆಲೆಗೊಳ್ಳ ಬೇಕಾದ ಕ್ಯಾಂಪಸ್ ಗಳು ಸಧ್ಯ ಕೆಲವೊಂದು ರಾಜಕೀಯ ಹಿತಾದ್ರಷ್ಟಿಯ ಮತೀಯ ಸಂಘಟನೆಗಳು ಕ್ಯಾಂಪಸ್ ನೊಳಗಿನ ಸೌಹಾರ್ಧ ವಾತಾವರಣಕ್ಕೆ ದಕ್ಕೆಯನ್ನುಂಟು ಮಾಡುತ್ತಿರುದಲ್ಲದೆ ಹೆತ್ತವರ ಕನಸನ್ನು ನುಚ್ಚುನೂರು ಮಾಡಿ ವಿಧ್ಯಾರ್ಥಿಗಳನ್ನು ಜೈಲು ಕಂಬಿಯವರೆಗೆ ಮುಟ್ಟಿಸುತ್ತಿದೆ ಎಂಬುದು ಸಧ್ಯದ ದುರದ್ರಷ್ಟ.ಇಸ್ಲಾಮಿನ ಚೌಕಟ್ಟನ್ನು ಮೀರಿ ವಿಧ್ಯಾರ್ಥಿನಿಯರನ್ನು ರಂಗ ಪ್ರವೇಶ ಮಾಡಿಸುವ ಮೌದೂದಿಗಳ ಗೂಡ ತಂತ್ರವನ್ನು ಮಾಡುತ್ತಿರುವಾಗ ಸುನ್ನೀ ಸಂಘಟನೆಗಳು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.ಸಧ್ಯ ವಿಧ್ಯಾರ್ಥಿ ಬದುಕಿನ ನೈಜ ಗುರಿಯನ್ನು, ಹೆತ್ತವರ ಕನಸನ್ನು ,ಸಮಾಜದ, ಸಮುದಾಯದ ಭಾಧ್ಯತೆಯನ್ನು ಮತ್ತೊಮ್ಮೆ ನೆನಪಿಸುವ, ನನಸಾಗಿಸುವ ಕನಸಿನೊಂದಿಗೆ ಭವ್ಯ ಭಾರತದಲ್ಲಿ ಸುಮಾರು 40ವರ್ಷಗಳಿಗಿಂತಲೂ ಮಿಕ್ಕ ವರ್ಷಗಳಿಂದ ಕಾರ್ಯಾಚರಿಸುತ್ತಿರುವ SSF ಜುಲೈ 16 ರಿಂದ 30 ರ ತನಕ ನಡೆಯುವ ಕರ್ನಾಟಕ ರಾಜ್ಯ ಕ್ಯಾಂಪಸ್ ಸಮಿತಿಯ ಸದಸ್ಯತನ ಅಭಿಯಾನದ ಅಂಗವಾಗಿ ಪುತ್ತೂರು ಡಿವಿಷನ್ ಮಟ್ಟದಲ್ಲಿ ಕಾರ್ಯದರ್ಶಿ ಶಪೀಕ್ ತಿಂಗಳಾಡಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಈಶ್ವರಮಂಗಲ, ಅಶ್ರಫ್ ಕಬಕ,ನಾಸಿರ್ ಕುಕ್ಕಾಜೆ,ಸಹದ್ ಕುಂಬ್ರ,ಅಲಿ ಕುಕ್ಕಿಲ ಹಾಗೂ ಹಲವಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.