ವಿಟ್ಲ,ಜು.21-ವಿಟ್ಲ ಎಸ್ ಎಸ್ ಎಫ್ ಕಛೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಡಿವಿಷನ್ ಮಟ್ಟದ ಕ್ಯಾಂಪಸ್ ಎಸ್ಸೆಸ್ಸಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಮಂಗಲಪದವು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಉಧ್ಘಾಟಿಸಿದರು, ಡಿವಿಷನ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿವಿಷನ್ ಕಾರ್ಯದರ್ಶಿ ಅಶ್ಫಾಕ್ ಟಿಪ್ಪುನಗರ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಡಿವಿಷನ್ ನಾಯಕರಾದ ರಹೀಂ ಸಖಾಫಿ ವಿಟ್ಲ , ಪ್ರಧಾನ ಕಾರ್ಯದರ್ಶಿ ರಝಾಕ್ ಪೆಲ್ತಡ್ಕ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿಗಳಾದ ಶರೀಫ್ ಅಳಿಕೆ, ಶಾಹಿರ್ ಕೊಳಂಬೆ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಜಂಶಾದ್ ಕಂಬಳಬೆಟ್ಟು ಸ್ವಾಗತಿಸಿ, ವಂದಿಸಿದರು.
ಪ್ರಕಟನೆ :- SSF ಕ್ಯಾಂಪಸ್ ವಿಟ್ಲ ಡಿವಿಷನ್