ಮಂಗಳೂರು: ಸುನ್ನಿ ಜಗತ್ತಿನ ಮಹಾನ್ ವಿದ್ವಾಂಸ ಅಖ್ತರ್ ರಝಾ ಖಾನ್ ಬರೇಲ್ವಿ ಇಂದು ನಿಧನರಾಗಿದ್ದು ಅವರ ವಿಯೋಗ ಸುನ್ನಿ ಜಗತ್ತಿಗೆ ತುಂಬಲಾರದ ನಷ್ಟ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಹೇಳಿದರು.
ಜಗತ್ತಿನಾದ್ಯಂತ ಸಹಸ್ರಾರು ಸುನ್ನಿಗಳ ಆಧ್ಯಾತ್ಮಿಕ ನಾಯಕರಾಗಿದ್ದ ಮಹಾನುಭಾವರ ಮೇಲೆ ಎಲ್ಲ ಎಸ್ಸೆಸ್ಸೆಫ್ ಕಾರ್ಯಕರ್ತರು ತಹ್ಲೀಲ್ ಖುರ್ಆನ್ ಪಾರಾಯಣಗಳನ್ನು ಮಾಡಿ ಪ್ರಾರ್ಥಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದರು.