janadhvani

Kannada Online News Paper

ಅಬುದಾಬಿ: ಇರಾನ್ ಕ್ಷಿಪಣಿ ದಾಳಿಗೆ ಮತ್ತೆ ಇಬ್ಬರು ಬಲಿ- ಮೂವರಿಗೆ ಗಾಯ

ಇದರೊಂದಿಗೆ ಯುಎಇಯಲ್ಲಿ ಈವರೆಗೆ ನಡೆದ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ.

ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಬುದಾಬಿಯಲ್ಲಿ ನಡೆದ ಇರಾನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಬುದಾಬಿಯ ಸ್ವೆಹಾನ್ ಸ್ಟ್ರೀಟ್‌ನಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಬುದಾಬಿ ಮೀಡಿಯಾ ಆಫೀಸ್ ತಿಳಿಸಿದೆ. ಮೃತರನ್ನು ಇನ್ನು ಗುರುತಿಸಲಾಗಿಲ್ಲ. ದಾಳಿಯಿಂದಾಗಿ ಹಲವಾರು ವಾಹನಗಳು ಜಖಂಗೊಂಡಿವೆ.

ಸ್ವೈಹಾನ್ ಸ್ಟ್ರೀಟ್ ಮೇಲೆ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತಡೆಯುವ ಸಂದರ್ಭದಲ್ಲಿ, ಅದರ ಅವಶೇಷಗಳು ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿವೆ. ಇದರೊಂದಿಗೆ ಯುಎಇಯಲ್ಲಿ ಈವರೆಗೆ ನಡೆದ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ. ದಾಳಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.