janadhvani

Kannada Online News Paper

ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಗೇಟ್‌ಗಳಲ್ಲಿ ನಗದು ಪಾವತಿಗೆ ಅವಕಾಶವಿಲ್ಲ

ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಗೇಟ್‌ಗಳಲ್ಲಿ ಮುಂಬರುವ ಏ.1ರಿಂದ ನಗದು ಪಾವತಿಗೆ ಅವಕಾಶವಿಲ್ಲ. ವಾಹನ ಚಾಲಕರು ಕಡ್ಡಾಯವಾಗಿ ಮೊತ್ತವನ್ನು ಡಿಜಿಟಲ್ ವಿಧಾನದಲ್ಲೇ ಅಂದರೆ ಫಾಸ್ಟ್ಯಾಗ್ ಅಥವಾ ಯುಪಿಐ ಮೂಲಕವೇ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಟೋಲ್ ಪ್ಲಾಝಾ ದಾಟುವ ವಾಹನಗಳು ಫಾಸ್ಟ್ಯಾಗ್ ಹೊಂದಿಲ್ಲದಿದ್ದಲ್ಲಿ, ನಗದು ರೂಪದಲ್ಲಿ ಪಾವತಿಸುವಾಗ ಅನ್ವಯವಾಗುವ ಸುಂಕದ 1.25 ಪಟ್ಟು ತೆರಬೇಕಾಗುತ್ತದೆ. ನಗದು ಪಾವತಿಯನ್ನು ಕಡಿಮೆ ಮಾಡುವ ಸಲುವಾಗಿ ಯುಪಿಐ ಮೂಲಕ ಪಾವತಿಯನ್ನು ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಸಂಗ್ರಹವಾಗುವ ಒಟ್ಟು ಸುಂಕದ ಪೈಕಿ ಶೇಕಡ 2ರಷ್ಟು ಯುಪಿಐ ಮೂಲಕ ಸಂಗ್ರಹವಾಗುತ್ತಿದೆ. ಶೇಕಡ 1ರಷ್ಟು ಪಾವತಿಯಾಗುತ್ತಿರುವ ನಗದು ಪಾವತಿಯನ್ನು ಇದೀಗ ಸ್ಥಗಿತಗೊಳಿಸಲಾಗುತ್ತಿದೆ. ತಿಂಗಳುಗಳ ಹಿಂದೆ ಅರ್ಧದಷ್ಟು ಸಂಗ್ರಹ ನಗದು ರೂಪದಲ್ಲಿ ಆಗುತ್ತಿತ್ತು.