janadhvani

Kannada Online News Paper

ಮಕ್ಕಾ ಮತ್ತು ಮದೀನಾ ಮಸೀದಿಯಲ್ಲಿ ‘ಇಅ್ತಿಕಾಫ್’- ನೋಂದಣಿ ಆರಂಭ

ಆಸಕ್ತರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಹೊಸ ಖಾತೆಯನ್ನು ರಚಿಸಿ ಅಥವಾ ಸೌದಿ ನಿವಾಸಿಗಳಾಗಿದ್ದರೆ 'ನಫಾದ್' (Nafadh) ಪ್ಲಾಟ್‌ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಜಿದ್ದಾ: ರಂಜಾನ್ ಮಾಸದ ಕೊನೆಯ ಹತ್ತು ದಿನಗಳಲ್ಲಿ ಮಕ್ಕಾದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಇಅ್ತಿಕಾಫ್ (ಮಸೀದಿಯಲ್ಲೇ ಕೂರುವುದು) ಕೈಗೊಳ್ಳಲು ಬಯಸುವವರಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಎರಡೂ ಹರಮ್‌ಗಳ ವ್ಯವಹಾರಗಳ ಪ್ರಾಧಿಕಾರ ತಿಳಿಸಿದೆ.

ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಇಅ್ತಿಕಾಫ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ (https://eservices.alharamain.gov.sa/ips/itikaf Requests/create) ಮೂಲಕ ಹೊಸ ಖಾತೆಯನ್ನು ರಚಿಸಿ ಅಥವಾ ಸೌದಿ ನಿವಾಸಿಗಳಾಗಿದ್ದರೆ ‘ನಫಾದ್’ (Nafadh) ಪ್ಲಾಟ್‌ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

“ಅರ್ಜಿದಾರರು ಎಲ್ಲಾ ನಿಯಮ ಮತ್ತು ನಿಬಂಧನೆಗಳನ್ನು ಅಂಗೀಕರಿಸಬೇಕು ಹಾಗೂ ಅಗತ್ಯವಿರುವ ಮಾಹಿತಿಯನ್ನು ಪೂರ್ಣಗೊಳಿಸಬೇಕು. ಅರ್ಜಿದಾರರಿಗೆ ಮಕ್ಕಾ ಅಥವಾ ಮದೀನಾದಲ್ಲಿ ತಮಗೆ ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಆದರೆ, ಸ್ಥಳದ ಮಿತಿಯನ್ನು ಪರಿಗಣಿಸಿ, ಅರ್ಜಿಗಳನ್ನು ಪರಿಶೀಲಿಸಿದ ನಂತರ ಲಭ್ಯವಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅನುಮತಿ ನೀಡಲಾಗುವುದು.”